(ನ್ಯೂಸ್ ಕಡಬ) newskadaba.com. ಬೆಂಗಳೂರು, ಮೇ.12. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಒಂದಕ್ಕೆ ಪೇಂಟಿಂಗ್ ಮಾಡುವಾಗ ತಾನು ಕಟ್ಟಿಕೊಟ್ಟಿಂಡಿದ್ದ ಹಗ್ಗ ತುಂಡಾಗಿ ಮೂರನೇ ಮಹಡಿಯಿಂದ ಪೇಂಟರ್ ಬಿದ್ದು ಸಾವನಪ್ಪಿರುವ ಘಟನೆ ಜೆ.ಪಿ. ನಗರದಲ್ಲಿ ನಡೆದಿದೆ.
ಬೆಂಗಳೂರಿನ ಜೆ.ಪಿ. ನಗರದ ಮಹಾರಾಜ ಪ್ಯಾಲೇಸ್ ಫೇಸ್ ನಲ್ಲಿರುವ ಅಪಾರ್ಟ್ಮೆಂಟ್‌ನಲ್ಲಿ ಪೇಂಟಿಂಗ್ ಕಾರ್ಯವನ್ನು ಮಾಡಲಾಗುತ್ತಿತ್ತು. ಇನ್ನು ಪೇಂಟಿಂಗ್ ಮಾಡುವವರು ಸುರಕ್ಷತೆಗಾಗಿ ರೋಪ್, ಹೆಲ್ಮೆಟ್ ಸೇರಿದಂತೆ ಹಲವು ಸುರಕ್ಷತಾ ಸಾಧನಗಳನ್ನು ಬಳಸಬೇಕು. ಆದರೆ, ಇಲ್ಲಿ ಸುರಕ್ಷತೆಗಾಗಿ ಬಳಕೆ ಮಾಡಲಾದ ಹಗ್ಗವೇ ಕಳಪೆಯಾಗಿದ್ದ, ಪೇಂಟಿಂಗ್ ಮಾಡುತ್ತಿರುವಾಗಲೇ ಪೇಂಟರ್ ಕಟ್ಟಿಕೊಂಡಿದ್ದ ಹಗ್ಗವು ತುಂಡಾಗಿ 3 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.