(ನ್ಯೂಸ್ ಕಡಬ) newskadaba.com. ಮಹಾರಾಷ್ಟ್ರ, ಮೇ.12.ಮಗನೊಬ್ಬ ತನ್ನ ತಾಯಿಯನ್ನು ಭೀಕರವಾಗಿ ಹತ್ಯೆ ಮಾಡಿ, ತಂದೆಯನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಡೆದಿದೆ. ಈ ದುರ್ಘಟನೆಯಿಂದ, ಮೃತಪಟ್ಟ ಮಹಿಳೆಯನ್ನು ವಿನಿತಾ ಭಟ್ಕರ್(66) ಎಂದು ಗುರುತಿಸಲಾಗಿದೆ.


ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಡೆದ ಘಟನೆ ಇದಾಗಿದ್ದು, ಮೃತ ಮಹಿಳೆ ವಿನಿತಾ ತನ್ನ ಪತಿಯೊಂದಿಗೆ ಕೊಪ್ರಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಗುರುವಾರ ಜಗಳವಾಡುವ ಸಂದರ್ಭದಲ್ಲಿ ಸಿಟ್ಟಿಗೆದ್ದ ಆರೋಪಿಯು, ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಡುಗೆ ಮನೆಯ ಚಾಕುವಿನಿಂದ ಪೋಷಕರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.