ಅಧಿಕೃತ ಅಭ್ಯರ್ಥಿಯನೇ ಉಚ್ಚಟಿಸಿದ ಜೆಡಿಎಸ್

(ನ್ಯೂಸ್ ಕಡಬ)newskadaba.com ಸಾಗರ, ಮೇ.12. ಸಾಗರ ವಿಧಾನಸಭೆ ಕ್ಷೇತ್ರದ ಅಧಿಕೃತ ಜೆಡಿಎಸ್ ಅಭ್ಯರ್ಥಿ ಸೈಯದ್ ಜಾಕೀರ್ ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿದೆ.


ಸಾಗರ ಕ್ಷೇತ್ರಕ್ಕೆ ಈ ಬಾರಿಯ ಚುನಾವಣೆಗೆ ಸೈಯದ್ ಜಾಕೀರ್ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಅವರು ನಾಮಪತ್ರವನ್ನು ಸಹ ಸಲ್ಲಿಕೆ ಮಾಡಿದ್ದರು. ಆದರೆ ಮತದಾನದ ಹಿಂದಿನ ದಿನ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಚುನಾವಣಾ ಕಣದಿಂದ ಹಿಂದೆ ಸರಿಯಲು ಆರೋಗ್ಯ ಕಾರಣ ಎಂದು ಸೈಯದ್ ಜಾಕೀರ್ ಹೇಳಿದ್ದರು. ಚುನಾವಣಾ ಕಣದಿಂದ ಹಿಂದೆ ಸರಿಯುವ ತೀರ್ಮಾನ ಪ್ರಕಟಿಸಿದ ಅವರು, ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬೇಳೂರು ಗೋಪಾಲಕೃಷ್ಣಗೆ ಬೆಂಬಲ ಘೋಷಣೆ ಮಾಡಿದ್ದರು.

Also Read  ಅನಾರೋಗ್ಯದಿಂದ ಇಸ್ರೋದ ಮಾಜಿ ರಾಕೆಟ್ ವಿಜ್ಞಾನಿ ಸಿ.ಆರ್.ಸತ್ಯ ವಿಧಿವಶ..!!  
error: Content is protected !!
Scroll to Top