ವ್ಯಕ್ತಿಗೆ‌ ಮಾರು ಹೋಗಿ‌ ಹಣ ಚಿನ್ನ ಕಳೆದುಕೊಂಡ ಮಹಿಳೆ

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.12. ಮ್ಯಾಟ್ರಿಮೋನಿಯಲ್​​ ವೆಬ್‌ಸೈಟ್‌ ಮೂಲಕ ಪರಿಚಯವಾಗಿದ್ದ ವ್ಯಕ್ತಿಯ ಮಾತಿಗೆ ಮರುಳಾದ ಬೆಂಗಳೂರು ಮೂಲದ ಮಹಿಳೆಯು ಲಕ್ಷಾಂತರ ನಗದು ಚಿನ್ನಾಭರಣಗಳನ್ನು ಕಳೆದುಕೊಂಡು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಏರ್‌ ಲೈನ್ ಉದ್ಯೋಗಿಯಾಗಿದ್ದ 39 ವರ್ಷ ವಯಸ್ಸಿನ ಬೆಂಗಳೂರಿನ ಮಹಿಳೆ, 15 ದಿನಗಳ ಹಿಂದೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಅನ್ಶುಲ್ ಜೈನ್ ನನ್ನು ಸಂಪರ್ಕಿಸಿದ್ದಾರೆ.

ಅನ್ಶುಲ್ ಜೈನ್ ತನ್ನನ್ನು ಎನ್‌ಸಿಆರ್ ಪ್ರದೇಶದಲ್ಲಿ ಉದ್ಯಮಿ ಎಂದು ಪರಿಚಯಿಸಿಕೊಂಡು ಆಕೆಯನ್ನು ದೆಹಲಿಗೆ ಬರುವಂತೆ ತಿಳಿಸಿದ್ದಾನೆ. ಜತೆಗೆ ತನ್ನ ಮನೆಯವರ ಜತೆಗೆ ಮದುವೆ ಮಾತುಕತೆ ನಡೆಸಲು ಬರುವಂತೆ ಹೇಳಿದ್ದಾನೆ. ಇದಕ್ಕೆ ಬರುವಾಗ ಉಡುಪುಗಳು ಮತ್ತು ಆಭರಣಗಳನ್ನು ತರುವಂತೆ ಅನ್ಶುಲ್ ಜೈನ್ ತನ್ನ ಬಳಿ ಹೇಳಿದ್ದಾನೆ ಎಂದು ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

Also Read  ಬೈಕ್ ಅಪಘಾತದಲ್ಲಿ ಗಾಯಗೊಡಿದ್ದ ವ್ಯಕ್ತಿ ಮೃತ್ಯು..!

 

error: Content is protected !!
Scroll to Top