ಬಾವಿಗೆ ಬಿದ್ದ ಮೂರು ವರ್ಷದ ಮಗುವನ್ನು ರಕ್ಷಿಸಿದ 13 ವರ್ಷದ ಬಾಲಕಿ

(ನ್ಯೂಸ್ ಕಡಬ)newskadaba.com ಚಾರ್ತಾ, ಮೇ.11. 40 ಅಡಿ ಅಳದ ಬಾವಿಗೆ ಬಿದ್ದ ಮಗುವನ್ನು 13 ವರ್ಷದ ಬಾಲಕಿ ರಕ್ಷಿಸಿದ ಘಟನೆ ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿ ನಡೆದಿದೆ.


ಮೂರು ವರ್ಷದ ಶಿವಂ ಕುಮಾರ್ ಬಾವಿಯ ಬಳಿ ಆಟವಾಡುತ್ತಿದ್ದಾಗ ಬಾವಿಗೆ ಬಿದ್ದಿದ್ದು, ಇದನ್ನು ನೋಡಿದ ಕಾಜಲ್ ಕುಮಾರಿ ಭೂಯಾನ್ ಒಂದು ಸೆಕೆಂಡ್ ವ್ಯರ್ಥ ಮಾಡದೆ ಬಾವಿಗೆ ಹಾರಿದ್ದಾಳೆ. ಒಂದು ಕೈಯಲ್ಲಿ ಮಗುವನ್ನು ಹಿಡಿದು ಇನ್ನೊಂದು ಕೈಯಲ್ಲು ಮೋಟಾರ್ ಪಂಪಿನ ಪೈಪ್ ಹಿಡಿದು ಸಹಾಯಕ್ಕಾಗಿ ಕೂಗಿದ್ದಾಳೆ. ಸುಮಾರು ಒಂದು ಗಂಟೆಯ ನಂತರ ಕಾಜಲ್ ಮತ್ತು ಶಿವಂ ಇಬ್ಬರನ್ನೂ ಹಗ್ಗದ ಸಹಾಯದಿಂದ ಗ್ರಾಮಸ್ಥರು ರಕ್ಷಿಸಿದ್ದಾರೆ.

Also Read  ಅಕ್ರಮ ಹಣ ವರ್ಗಾವಣೆ ಪ್ರಕರಣ  ಅಮಾನತುಲ್ಲಾ ಖಾನ್ನನ್ನು4 ದಿನಗಳ ಕಾಲ ಈಡಿ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯ ಆದೇಶ

error: Content is protected !!
Scroll to Top