ಚಿಕಿತ್ಸೆ ನೀಡುತ್ತಿದ್ದ ವೈದ್ಯೆಗೆ ಚಾಕುವಿನಿಂದ ಇರಿದ ವ್ಯಕ್ತಿ.!

(ನ್ಯೂಸ್ ಕಡಬ)Newskadaba.com ಕೇರಳ,ಮೇ.11 ಕೇರಳದಲ್ಲಿ ಚಿಕಿತ್ಸೆಗಾಗಿ ಕರೆತಂದಿದ್ದ ವ್ಯಕ್ತಿಯೊಬ್ಬ ಯುವ ವೈದ್ಯೆಯನ್ನ ಇರಿದು ಹತ್ಯೆ ಮಾಡಿದ ಘಟನೆ ನಡೆದಿದೆ. ವೈದ್ಯೆಯನ್ನು ಕೊಟ್ಟಾಯಂ ಮೂಲದ ಡಾ. ವಂದನಾ ದಾಸ್ ಗುರುತಿಸಲಾಗಿದೆ.

ಚಾಕು ಇರಿತದಿಂದ ಡಾ.ವಂದನಾ ದಾಸ್ ಕುತ್ತಿಗೆ, ತಲೆ ಮತ್ತು ಬೆನ್ನುಮೂಳೆಗೆ ಗಾಯಗಳಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.ಈ ಘಟನೆ ಬೆನ್ನಲ್ಲೇ ಕೇರಳದಲ್ಲಿ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆರೋಪಿ ಕೊಲ್ಲಂ ಜಿಲ್ಲೆಯ ಶಾಲಾ ಶಿಕ್ಷಕನಾಗಿರುವ ಸಂದೀಪ್(42). ಈತ ಮಾದಕ ವಸ್ತು ಸೇವನೆಯಿಂದ ಡಿ-ಅಡಿಕ್ಷನ್ ಥೆರಪಿಗೆ ಒಳಗಾಗಿದ್ದರ ಎಂದು ಹೇಳಲಾಗುತ್ತಿದೆ.

Also Read  ಸರಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ! ➤ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಘೋಷಣೆ

ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಇಂಡಿಯನ್​ ಮೆಡಿಕಲ್​ ಅಸೋಸಿಯೇಷನ್​(IMA) ಅಧ್ಯಕ್ಷ ಡಾ. ಸುಲ್ಫಿ ನುಹೂ ಕಳೆದ ಕೆಲ ಸಮಯದಿಂದ ವೈದ್ಯರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಸರ್ಕಾರ ಕೂಡ ಕಠಿಣ ಕಾನೂನು ಜಾರಿಗೆ ತರುವ ಮೂಲಕ ಅಪರಾಧಿಗಳಿಗೆ ಶಿಕ್ಷೆ ನೀಡುವುದಾಗಿ ಹೇಳುತ್ತಿದೆ.

 

 

 

error: Content is protected !!
Scroll to Top