(ನ್ಯೂಸ್ ಕಡಬ)Newskadaba.com ರಾಯಚೂರು,ಮೇ.11 ಮಸ್ಕಿ ಕ್ಷೇತ್ರದ ಕಾಂಗ್ರೆಸ್ನ ಮಾಜಿ ಶಾಸಕ ಬಸನಗೌಡ ತುರುವಿಹಾಳ ಸಹೋದರ ಸಿದ್ದನಗೌಡರ ಮೇಲೆ ಬಿಜೆಪಿ ಕಾರ್ಯಕರ್ತರು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಯಿಂದಾಗಿ ನಗರದಲ್ಲಿ ಉದ್ವಿಗ್ನ ವಾತಾವರಣ ಏರ್ಪಟ್ಟಿದೆ.
ಕಾಂಗ್ರೆಸ್ನ ಬಸನಗೌಡ ತುರುವಿನಹಾಳ ಸಹೋದರ ಸಿದ್ದನಗೌಡ ಪಟ್ಟಣದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಿಜೆಪಿಯ ಪ್ರತಾಪ್ ಗೌಡ ಅವರ ಪುತ್ರ ರಾಕೇಶ್ ಪಾಟೀಲ್ ಹಾಗೂ ಅವರ 150 ಬೆಂಬಲಿಗರು ಸೇರಿ ಏಕಾಏಕಿ ಸಿದ್ದನಗೌಡರ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.ಪಟ್ಟಣದಲ್ಲಿ ಅಟ್ಟಾಡಿಸಿಕೊಂಡು ಕೋಲಿನಿಂದ ಹೊಡೆದಿದ್ದಾರೆ. ಹಲ್ಲೆಯಿಂದಾಗಿ ಸಿದ್ದನಗೌಡ ತಲೆಗೆ ತೀವ್ರ ಗಾಯಗಳಾಗಿವೆ. ಇನ್ನು ಸಿದ್ದನಗೌಡರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ.