ಚಾರ್ಮಾಡಿಯಲ್ಲಿ ರಾತ್ರಿ 10.30ರವರೆಗೆ ತೆರಳದ ಮತಗಟ್ಟೆ ಅಧಿಕಾರಿಗಳು ➤ ಅನುಮಾನಗೊಂಡು ಸೇರಿದ ಜನ, ಕೆಲಕಾಲ ಗೊಂದಲ ಸೃಷ್ಟಿ

(ನ್ಯೂಸ್ ಕಡಬ)newskadaba.com ಚಾರ್ಮಾಡಿ, ಮೇ.11. ಮತದಾನ ಮುಗಿದಿದ್ದರೂ ರಾತ್ರಿ 10:30 ದಾಟಿದರೂ ಮತಗಟ್ಟೆಯ ಅಧಿಕಾರಿಗಳು ತೆರಳಲಿಲ್ಲ ಎಂದು ಸಂಶಯದಿಂದ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆಯ ಬಳಿ ಸೇರಿ ಪ್ರಶ್ನಿಸಿದ್ದಾರೆ.


ಚಾರ್ಮಾಡಿಯ ಬೂತ್ ವೊಂದರಲ್ಲಿ ರಾತ್ರಿ 7:20ರವರೆಗೂ ಮತದಾನ ನಡೆದಿತ್ತು. ಆದರೆ ರಾತ್ರಿ 10:30 ದಾಟಿದರೂ ಮತಗಟ್ಟೆಯ ಅಧಿಕಾರಿಗಳು ಅಲ್ಲಿಂದ ತೆರಳಿರಲಿಲ್ಲ.ಒಂದೇ ಒಂದು ಬೂತ್ ನಲ್ಲಿ ಮತದಾನ ವಿಳಂಬವಾಗಿತ್ತು.ಆದರೆ ಚಾರ್ಮಾಡಿ ಪಂಚಾಯತ್ ವ್ಯಾಪ್ತಿಯ ಯಾವುದೇ ಬೂತ್ ಗಳಿಂದ ಮತಯಂತ್ರಗಳನ್ನು ಕೊಂಡೊಯ್ದಿರಲಿಲ್ಲ.‌ಇದರಿಂದ ಕಾರ್ಯಕರ್ತರ ಅನುಮಾನ ಉಂಟಾಗಿದೆ.

error: Content is protected !!
Scroll to Top