ದ.ಕ. ಜಿಲ್ಲೆಯಲ್ಲಿ74.87% ಮತದಾನ ➤ ಉಡುಪಿಯಲ್ಲಿ 78.46 ಶೇ. ಮತದಾನ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.11. ರಾಜ್ಯ ವಿಧಾನಸಭೆ ಚುನಾವಣೆ ಮುಗಿದಿದ್ದು ದಿನದಂತ್ಯಕ್ಕೆ ದ.ಕ. ಜಿಲ್ಲೆಯಲ್ಲಿ ೭೫.೮೭% ಮತದಾನವಾಗಿದೆ. ಕ್ಷೇತ್ರವರು ಮತದಾನ ವಿವರವನ್ನು ಚುನಾವಣಾ ಅಯೋಗ ತಿಳಿಸಿದೆ. ಅದರಂತೆ ಮಂಗಳೂರು ಉತ್ತರದಲ್ಲಿ ೭೧.೬ ಶೇಕಡ ಮತದಾನವಾಗಿದೆ. ಪುತ್ತೂರು ಕ್ಷೇತ್ರದಲ್ಲಿ ೭೯.೯೧ ಶೇಕಡ ಮತದಾನವಾಗಿದೆ. ಸುಳ್ಯ ಕ್ಷೇತ್ರದಲ್ಲಿ ೭೮.೫೩ ಶೇಕಡ ಮತದಾನವಾಗಿದೆ.

ಉಳ್ಳಾಲ ಕ್ಷೇತ್ರದಲ್ಲಿ ೭೭.೩೮ ಶೇ. ಮತದಾನವಾಗಿದೆ. ಇನ್ನು ಬಂಟ್ವಾಳದಲ್ಲಿ ೮೦.೨೭ ಶೇ. ಮತದಾನವಾಗಿದೆ. ಮೂಡುಬಿದಿರೆ ಕ್ಷೇತ್ರದಲ್ಲಿ ೭೬ ಶೇ. ಮತದಾನವಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ೬೪.೮೯ ಮತದಾನವಾಗಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ೮೦.೩೩ ಶೇ.ದಷ್ಟು ಮತದಾನವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು ೭೮.೪೬ ಶೇ. ಮತದಾನವಾಗಿದೆ. ಉಳಿದಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಮತದಾನದ ಶೇಕಡವರು ವಿವರ ಇಂತಿದೆ.
ಬೈಂದೂರಿನಲ್ಲಿ ೭೭.೮೪ ಶೇ.
ಕಾಪು-೭೮.೭೯ ಶೇ.
ಕಾರ್ಕಳ-೮೧.೩೦ ಶೇ.
ಕುಂದಾಪುರ-೭೮.೯೪ ಶೇ.
ಉಡುಪಿ-೭೫.೮೭ ಶೇ.

error: Content is protected !!

Join the Group

Join WhatsApp Group