ಮಗಳು ಫಸ್ಟ್​ಟೈಮ್​ ವೋಟ್ ಮಾಡುತ್ತಿದ್ದಾಳೆ.!➤ ಕಿಚ್ಚ ಸುದೀಪ್ ಸಂಭ್ರಮ

(ನ್ಯೂಸ್ ಕಡಬ)Newskadaba.com ಬೆಂಗಳೂರು ,ಮೇ.10 ಕಿಚ್ಚ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಮಾಡಿದಾಗಿನಿಂದ ಸುದ್ದಿಯಲ್ಲಿದ್ದಾರೆ. ಅದರಲ್ಲೂ ‘ಬೊಮ್ಮಾಯಿ ಮಾಮ’ ಪರವಾಗಿ ಪ್ರಚಾರ ಮಾಡಿದಾಗಿನಿಂದ ಹಿಡಿದು ಅವರ ಈ ನಡೆಯ ಬಗ್ಗೆ ಪರ ವಿರೋಧಗಳು ಕೇಳಿ ಬರುತ್ತಿದ್ದವು.

ಇಂದು ರಾಜ್ಯದ ಭವಿಷ್ಯ ನಿರ್ಧಾರ ಆಗುವ ದಿನ ಆಗಿದ್ದು ಕಿಚ್ಚ ಸುದೀಪ್ ಪುಟ್ಟೇನಹಳ್ಳಿ ಆಕ್ಸ್‌ಫರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭ ಮಾತನಾಡಿದ ಕಿಚ್ಚ ‘ನನ್ ಮಗಳು ಫಸ್ಟ್ ಟೈಮ್ ವೋಟ್ ಮಾಡ್ತಿದಾಳೆ. ರೋಡ್ ತುಂಬಾ ವೀಡಿಯೋ ಮಾಡ್ತಾ ಬಂದೆ. ನನ್ನ ಮಗಳು ಏನೆ ಮಾಡಿದ್ರು ಅದನ್ನ ವೀಡಿಯೋ ಮಾಡಿ ಸೆಲೆಬ್ರೇಟ್ ಮಾಡ್ತೀನಿ ಎಂದರು.

Also Read  ಜ.07 ರಂದು ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡಾಶಾಲೆ ಮತ್ತು ವಸತಿ ನಿಲಯಕ್ಕೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ➤ ಜ.03 ರಿಂದ ದ.ಕ ಜಿಲ್ಲೆಯ ವಿವಿಧೆಡೆ ಪ್ರಾರಂಭ

 

 

error: Content is protected !!
Scroll to Top