ಭಾರತೀಯ ಸೇನೆಯಿಂದ ಇಬ್ಬರು ಉಗ್ರರು ಅರೆಸ್ಟ್

(ನ್ಯೂಸ್ ಕಡಬ)newskadaba.com ಶ್ರೀನಗರ, ಮೇ.10. ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಇಬ್ಬರು ಸಹಚರರನ್ನು ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧಿಸಿದೆ. ಬಂಧಿತರನ್ನು ಶಾಹಿದ್ ಅಹ್ಮದ್ ಲೋನ್ ಹಾಗೂ ವಸೀಮ್ ಅಹ್ಮದ್ ಗನಿ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ಸ್ಥಳಿಯ ನಿವಾಸಿಗಳಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ಓರ್ವ ಉಗ್ರನಿಂದ 1 ಪಿಸ್ತೂಲ್, 1 ಪಿಸ್ತೂಲ್ ಮ್ಯಾಗಜೀನ್, 4 ಪಿಸ್ತೂಲ್ ರೌಂಡ್ಸ್, 1 ರಿವಾಲ್ವಾರ್ ಸೈಲೆನ್ಸರ್, 1 ಐಇಡಿ, 1 ರಿಮೋಟ್ ಕಂಟ್ರೋಲ್, 2 ಬ್ಯಾಟರಿಗಳು, ಎಕೆ 47 ರೈಫಲ್‍ನ 1 ಖಾಲಿ ಮ್ಯಾಗಜೀನ್ ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೋರ್ವನಿಂದ 1 ಎಕೆ ಸಿರೀಸ್ ರೈಫಲ್, 1 ಮ್ಯಾಗಜೀನ್ ಮತ್ತು 10 ಸುತ್ತಿನ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಗಣೇಶ ಹಬ್ಬಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧತೆ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳು ವಶಕ್ಕೆ

 

error: Content is protected !!
Scroll to Top