ಇಲ್ಯಾಸ್ ಹಂತಕರನ್ನು ಕೊಲ್ಲದೆ ಬಿಡುವುದಿಲ್ಲ, ಮಲಗಿದ್ದವನನ್ನು ಕೊಲ್ಲಲು ನಾಚಿಕೆಯಾಗೋದಿಲ್ವ.? ►ನನ್ನ ಜೀವವನ್ನು ಕೊಂದು ಬಿಟ್ಟರಲ್ವಾ…? ಅನಾಮಧೇಯ ಆಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ.16. ಉಳ್ಳಾಲ ಟಾರ್ಗೆಟ್ ಗ್ರೂಪ್ ರೂವಾರಿ, ನಟೋರಿಯಸ್ ರೌಡಿ ಇಲ್ಯಾಸ್ ಹತ್ಯೆಗೆ ಸೇಡು ತೀರಿಸದೆ ಬಿಡಲಾರೆವು ಎಂದು ಹೇಳಿಕೊಳ್ಳುವ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟಾರ್ಗೆಟ್ ಇಲ್ಯಾಸ್ ನ್ನು ಮಂಗಳೂರಿನ ಜೆಪ್ಪು ಕುದ್ಪಾಡಿಯಲ್ಲಿರುವ ಆತನ ಫ್ಲಾಟ್ ಗೆ ಸ್ನೇಹಿತರ ನೆಪದಲ್ಲಿ ನುಗ್ಗಿದ ದುಷ್ಕರ್ಮಿಗಳು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು.ಟಾರ್ಗೆಟ್ ಗ್ಯಾಂಗಿನಲ್ಲಿ ಈ ಹಿಂದೆ ಜತೆಯಲ್ಲೇ ಇದ್ದವರು ಈ ಕೃತ್ಯ ನಡೆಸಿದ್ದರೆಂಬ ಶಂಕೆ ವ್ಯಕ್ತವಾಗಿತ್ತು. ಇಲ್ಯಾಸ್ ಹತ್ಯೆಯ ಪ್ರತಿಕಾರ ಮಾಡದೆ ಬಿಡುವುದಿಲ್ಲ. ಮಲಗಿದ್ದವನ ಮೇಲೆ ದಾಳಿ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ..? ಇದು ಇಲ್ಲಿಗೆ ಮುಗಿದಿಲ್ಲ .. ನಾವು ತೆಗೆದೇ ತೆಗೆಯುತ್ತೇವೆ… ಎಂದು ಮಲಯಾಳಂ ಭಾಷೆಯಲ್ಲಿರುವ ಆಡಿಯೋ ಇದೀಗ ವೈರಲ್ ಆಗಿದೆ.

Also Read  ವೃದ್ಧ ನಾಪತ್ತೆ

error: Content is protected !!
Scroll to Top