ಎಣ್ಣೆ ಹೊಡೆದು ಬಂದ ಚುನಾವಣಾ ಸಿಬ್ಬಂದಿ ಸಸ್ಪೆಂಡ್

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಮೇ.10. ಚುನಾವಣಾ ಕರ್ತವ್ಯಕ್ಕೆ ಕುಡಿದು ಬಂದಿದ್ದ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.


ಅಮಾನತುಗೊಂಡವರನ್ನು ಮಾಲತೇಶ್ ಹಾಗು ರಮೇಶ್ ಎಂದು ಗುರುತಿಸಲಾಗಿದೆ. ರಮೇಶ್ ತೋಟಗಾರಿಕೆ ಇಲಾಖೆಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಮಾಲತೇಶ್ ಶಿಕ್ಷಕ ಎನ್ನಲಾಗಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಸ್ಟರಿಂಗ್‌ ನಲ್ಲಿ ಇಬ್ಬರೂ ಪಾನಮತ್ತರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು.

error: Content is protected !!
Scroll to Top