ಚಿಕಿತ್ಸೆ ನೀಡ್ತಿದ್ದ ವೈದ್ಯೆಯನ್ನೇ ಚಾಕುವಿನಿಂದ ಇರಿದು ಕೊಂದ ಕೇಸ್ ➤ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com. ಕೇರಳ,ಮೇ. 10. ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯ ಮೇಲೆ ಪ್ರಕರಣದ ಆರೋಪಿಯೊಬ್ಬ ಚಿಕಿತ್ಸೆಗೆ ಬಳಸುವ ಸರ್ಜಿಕಲ್​ ಬ್ಲೇಡ್​ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ದಲ್ಲಿ ಇಂದು ನಡೆದಿದೆ.

ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ಕರೆತಂದ ವೇಳೆ ದಾಳಿ ನಡೆಸಿದ ಆತ ಯುವ ವೈದ್ಯೆಯನ್ನು ಸರ್ಜಿಕಲ್​ ಬ್ಲೇಡ್​ನಿಂದ ಹತ್ಯೆ ಮಾಡಿದ ಆಘಾತಕಾರಿ ಘಟನೆ ಕೇರಳದಲ್ಲಿ ಬುಧವಾರ ನಡೆದಿದೆ.

ಕೊಟ್ಟಾಯಂ ಮೂಲದ ಡಾ.ವಂದನಾ ದಾಸ್ ಮೃತರು. ಸಂದೀಪ್ ಕೊಲೆಗೈದ ಆರೋಪಿ. ಇಲ್ಲಿನ ಕೊಟ್ಟಾರಕರದ ಆಸ್ಪತ್ರೆಗೆ ಇಂದು ಮುಂಜಾನೆ ಗಾಯಗೊಂಡಿದ್ದ ಆರೋಪಿ ಸಂದೀಪ್​ನನ್ನು ಪೊಲೀಸರು ತಪಾಸಣೆಗೆ ಕರೆ ತಂದಿದ್ದರು. 22 ವರ್ಷದ ಮಹಿಳಾ ಸರ್ಜನ್​ ವಂದನಾ ಗಾಯಗೊಂಡ ಆರೋಪಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮಹಿಳಾ ವೈದ್ಯೆಯ ಮೇಲೆ ಆತ ಹಲ್ಲೆ ಮಾಡಿದ್ದಾನೆ.

error: Content is protected !!
Scroll to Top