22 ವರ್ಷದ ಯುವಕನನ್ನು ಚಾಕುವಿನಿಂದ ಇರಿದು ಕೊಂದ ಅಪ್ರಾಪ್ತ ವಯಸಿನ ಹುಡುಗರು.!

(ನ್ಯೂಸ್ ಕಡಬ)Newskadaba.com ಮುಂಬೈ,ಮೇ.10 ಸಿಗರೇಟ್​ ಹಚ್ಚಿಕೊಳ್ಳಲು ಬೆಂಕಿ ಕಡ್ಡಿ ನೀಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಅಪ್ರಾಪ್ತ ವಯಸಿನ ಹುಡುಗರು 22 ವರ್ಷದ ಯುವಕನನ್ನು ಇರಿದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.ಮುಂಬೈನ ಮಂಖುರ್ದ್​ ಪ್ರದೇಶದಲ್ಲಿ ಘಟನೆ ನಡೆದಿದ್ದು ರಂಜಾನ್ ಅಬ್ದುಲ್​​ ಹಮೀದ್ ಶೇಖ್​(22) ಎಂದು ಗುರುತಿಸಲಾಗಿದೆ.

ಬೆಂಕಿ ಕಡ್ಡಿ ನೀಡದ್ದಕ್ಕೆ ಕೊಲೆ ಘಟನೆ  ಸಂಜೆ ಮಂಖುರ್ದ್​ ಪ್ರದೇಶದಲ್ಲಿ ನಡೆದಿದ್ದು ಹಮೀದ್​ ಬಳಿ ಇಬ್ಬರು ಅಪ್ರಾಪ್ತ ವಯಸಿನ ಹುಡುಗರು ಬಂದು ಸಿಗರೇಟ್​ ಹಚ್ಚಿಕೊಳ್ಳಲು ಮ್ಯಾಚ್​ ಬಾಕ್ಸ್​ ಕೇಳಿದ್ದಾರೆ.ಈ ವೇಳೆ ಬಾಲಕರಿಬ್ಬರಿಗೆ ಹಮೀದ್​ ಮ್ಯಾಚ್​ ಬಾಕ್ಸ್​ ನೀಡಲು ನಿರಾಕರಿಸಿದ್ಧಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಅಪ್ರಾಪ್ತ ವಯಸಿನ ಹುಡುಗರಿಬ್ಬರು ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

Also Read  ಕೊರೊನಾಗೆ ಶಾಸಕ ಬಲಿ
error: Content is protected !!
Scroll to Top