ಬೆಳ್ತಂಗಡಿ: ತಡರಾತ್ರಿ ಹರೀಶ್ ಪೂಂಜಾ ಅವರ ಪರ ಹಣ ಹಂಚಿಕೆ ➤ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾರ್ಯಕರ್ತರು

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಮೇ.10. ಬೆಳ್ತಂಗಡಿಯಲ್ಲಿ ಬಿಜೆಪಿ ನಾಯಕನೋರ್ವ ಹರೀಶ್ ಪೂಂಜಾ ಅವರ ಪರ ತಡರಾತ್ರಿಯಲ್ಲಿ ಹಣ ಹಂಚಿಕೆ ಮಾಡುತ್ತಿದ್ದಾಗ ಸಿಕ್ಕಿ ಬಿದ್ದ ಘಟನೆ ನಡೆದಿದೆ.


ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯನಂದ ಗೌಡ ಅವರು ಕೆಲ್ಲಗುತ್ತು ಕಾಲೋನಿಯಲ್ಲಿ ಹಣ ಹಂಚುವಾಗ ರೆಡ್ ಹ್ಯಾಂಡ್ ಆಗಿ ಕಾಂಗ್ರೆಸ್ ಮಾಜಿ ಶಾಸಕ ವಸಂತ ಬಂಗೇರ ಅವರ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ. ಸ್ಥಳದಲ್ಲಿ ಮಾತಿನ‌ ಚಕಮಕಿ ನಡೆದು ಹೈಡ್ರಾಮವೇ ನಡೆದಿದೆ.


ಇನ್ನು ಬಿಜೆಪಿ ನಾಯಕರು ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಹಣ ಹಂಚುತ್ತಿದ್ದು, ಅವರನ್ನು ಚುನಾವಣಾಧಿಕಾರಿಗಳಿಗೆ ಮಾಜಿ ಶಾಸಕ ಕೆ ವಸಂತ ಬಂಗೇರ ಒಪ್ಪಿಸಿದ್ದಾರೆ. ಹರೀಶ್ ಪೂಂಜಾ ಪರವಾಗಿ ಇವರು ಹಣ ಹಂಚಿಕೆ ಮಾಡಿ ಮತವನ್ನು ಕೊಂಡು ಕೊಳ್ಳಲು ಮುಂದಾಗಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.

Also Read  ಇಂದು ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣ ವಚನ ► ಉತ್ತರದಿಂದ ದಕ್ಷಿಣದವರೆಗಿನ ಗಣ್ಯಾತಿಗಣ್ಯರು ಭಾಗಿ

 

error: Content is protected !!
Scroll to Top