ಉಯ್ಯಾಲೆ ಕುತ್ತಿಗೆಗೆ ಬಿಗಿದು ಬಾಲಕ ಮೃತ್ಯು

(ನ್ಯೂಸ್ ಕಡಬ)newskadaba.com ಕಾಸರಗೋಡು, ಮೇ.10. ಉಯ್ಯಾಲೆ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಚಿಟ್ಟಾರಿಕ್ಕಲ್‌ನಲ್ಲಿ ನಡೆದಿದೆ. ಚಿಟ್ಟಾರಿಕ್ಕಲ್‌ ಕಂಬಲ್ಲೂರು ತಾಮರಸ್ಶೆರಿಯ ಸುಧೀಶ್‌ ಅವರ ಪುತ್ರ ಸೌರಂಗ್‌ (9) ಮೃತಪಟ್ಟ ಬಾಲಕ ಎಂದು ತಿಳಿದುಬಂದಿದೆ.

ಮನೆಯ ಸಮೀಪದ ರಬ್ಬರ್‌ ತೋಟದಲ್ಲಿ ಸೀರೆ ಬಳಸಿ ಉಯ್ಯಾಲೆ ಕಟ್ಟಲಾಗಿತ್ತು. ಉಯ್ಯಾಲೆಯಲ್ಲಿ ಆಟ ಆಡುತ್ತಿದ್ದಾಗ ಕುತ್ತಿಗೆಗೆ ಬಿಗಿದು ಗಂಭೀರ ಸ್ಥಿತಿಗೆ ತಲುಪಿದ ಸೌರಂಗ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

ಚಿಟ್ಟಾರಿಕ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಮೃತ ದೇಹವನ್ನು ಶವ ಮಹಜರಿಗಾಗಿ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Also Read  ಆಟೋ, ಟ್ಯಾಕ್ಸಿ ಚಾಲಕರಿಗೆ ಗುಡ್ ನ್ಯೂಸ್ ➤ 40 ಕೋಟಿ ರೂ. ಬಿಡುಗಡೆ ಮಾಡಿದ ಕರ್ನಾಟಕ ಸರ್ಕಾರ

 

 

error: Content is protected !!
Scroll to Top