ಜೆಡಿಎಸ್ ಅಭ್ಯರ್ಥಿ ಬೆಂಬಲಿಗ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ  ಮಾತಿನ ಚಕಮಕಿ.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.10 ಆರ್​ಟಿ ನಗರದ ಪ್ರೆಸಿಡೆನ್ಸಿ ಶಾಲೆಯ ಮತಗಟ್ಟೆ ಬಳಿ ಜೆಡಿಎಸ್ ಅಭ್ಯರ್ಥಿ ಬೆಂಬಲಿಗ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ಮಾತಿನ ಚಕಮಕಿ ನಡೆದಿದೆ.ಮತಗಟ್ಟೆ ಮುಂದೆ ನಿಂತ ಮತದಾರರ ಬಳಿ ಜೆಡಿಎಸ್​ಗೆ ಬೆಂಬಲ ನೀಡುವಂತೆ ಜೆಡಿಎಸ್​ ಅಭ್ಯರ್ಥಿಯ ಬೆಂಬಲಿಗರೊಬ್ಬರು ಮನವಿ ಮಾಡಿದ್ದಾರೆ.

ಜೆಡಿಎಸ್​ ಬೆಂಬಲಿಗ ಜನರಲ್ಲಿ ಮನವಿ ಮಾಡಿದ್ದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್ ರೊಚ್ಚಿಗೆದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್, ‘ನಿಮಗೆ ವೋಟು ಇಲ್ಲದಿದ್ರೂ ಮತಗಟ್ಟೆಗೆ ಪ್ರವೇಶಿಸಿದ್ದೀರಾ. ಅದರ ಜತೆಗೆ ಇಲ್ಲಿ ಮತ ಕೇಳಿ ಕಾನುನು ಉಲ್ಲಂಘಿಸುತ್ತಿದ್ದೀರಾ. ಇಲ್ಲಿ ಬಂದು ರೌಡಿಸಂ ಮಾಡಬೇಡಿ’ ಎಂದು ರೊಚ್ಚಿಗೆದ್ದಿದ್ದಾರೆ.

Also Read  ಮೋಟಾರ್‌ ವೆಹಿಕಲ್‌ ಇನ್ಸ್‌ಪೆಕ್ಟರ್‌ ಹುದ್ದೆ- ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ

 

 

error: Content is protected !!
Scroll to Top