ಕೆರ್ಮಾಯಿ ಮತಗಟ್ಟೆಯಲ್ಲಿ ಅಧಿಕಾರಿಗಳ ಎಡವಟ್ಟು ➤ ಒಬ್ಬರ ಮತ ಚಲಾಯಿಸಿದ ಮತ್ತೋರ್ವ, ಕೆಲಕಾಲ ಗೊಂದಲ ಸೃಷ್ಟಿ

(ನ್ಯೂಸ್ ಕಡಬ) newskadaba.com ಕಡಬ, ಮೇ‌.10. ಮತಗಟ್ಟೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಯುವಕನೋರ್ವ ಮತ ಚಲಾವಣೆಯಿಂದ ವಂಚಿತನಾದ ಘಟನೆ ಸುಳ್ಯ ವಿಧಾನಸಭಾ ಕ್ಷೇತ್ರದ ಕೆರ್ಮಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 101ರಲ್ಲಿ ನಡೆದಿದೆ.

ಸಾದಿಕ್ ಎಂಬವರ ಮತವನ್ನು ಸಾದಿಕ್ ಕೆ. ಎಂಬವರು ಚಲಾಯಿಸಿದ್ದು, ಆ ಬಳಿಕ ಸಾದಿಕ್ ಅವರು ಆಗಮಿಸಿದ ಸಂದರ್ಭದಲ್ಲಿ ಮತ ಚಲಾವಣೆಯಾಗಿರುವುದು ಗಮನಕ್ಕೆ ಬಂದಿದೆ. ಇಬ್ಬರ ತಂದೆಯ ಹೆಸರು ಒಂದೇ ರೀತಿಯಾಗಿರುವುದರಿಂದ ಈ ವೇಳೆ ಕೆಲಕಾಲ ಗೊಂದಲಕ್ಕೆ ಕಾರಣವಾಯಿತಾದರೂ ಕೊನೆಗೆ ಸಾದಿಕ್ ಗೆ ಮತ ಚಲಾಯಿಸಲು ಅವಕಾಶ ಸಿಗದೆ ಹಿಂತಿರುಗುವಂತಾಯಿತು‌.

Also Read  ಎ.9: ಸವಣೂರು ಯುವಕ‌ ಮಂಡಲದ ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ

error: Content is protected !!
Scroll to Top