ಮತದಾರರಿಗೆ ಹಣ ಹಂಚುತ್ತಿದ್ದ 13 ಮಂದಿ ಯುವಕರು  ಪೊಲೀಸರ ವಶಕ್ಕೆ…!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.10  ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯ ಮರವೊಂದರ ಬುಡದಲ್ಲಿ ಬಿಸಾಕಿದ್ದ ₹ 4.95 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದು, ಮತದಾರರಿಗೆ ಆಮಿಷವೊಡ್ಡುತ್ತಿದ್ದ ಆರೋಪದಡಿ 13 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ‘ತಮಿಳುನಾಡಿನಿಂದ ನಗರಕ್ಕೆ ಬಂದಿದ್ದ ಕೆಲ ಯುವಕರು, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆಲ ಮನೆಗಳಿಗೆ ತೆರಳಿ ಹಣ ಹಂಚುತ್ತಿದ್ದರು.

ಮಾಹಿತಿ ಬರುತ್ತಿದ್ದಂತೆ ಚುನಾವಣಾಧಿಕಾರಿ ತಂಡದ ಜೊತೆ ಜಂಟಿ ಕಾರ್ಯಾಚರಣೆ ನಡೆಸಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.’ಹಣ ಹಂಚುತ್ತಿದ್ದ 13 ಮಂದಿ ಕೈಗೆ ಸಿಕ್ಕಿಬಿದ್ದಿದ್ದು, ಕೆಲವರು ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಅವರ ಬಳಿ ಇದ್ದ ಬ್ಯಾಗ್‌ವೊಂದನ್ನು ಮರದ ಬುಡದಲ್ಲಿ ಎಸೆದು ಹೋಗಿದ್ದರು. ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ, ಬ್ಯಾಗ್ ಪತ್ತೆಯಾಗಿತ್ತು.

Also Read  ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿ ಅರೆಸ್ಟ್

ಅದರಲ್ಲಿದ್ದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಕ್ಕೆ ಪಡೆದಿರುವ ಆರೋಪಿಗಳು, ಕಾಂಗ್ರೆಸ್ ಅಭ್ಯರ್ಥಿ ಆರ್‌.ಕೆ. ರಮೇಶ್ ಪರ ಮತ ಚಲಾಯಿಸುವಂತೆ ಹಣ ಹಂಚುತ್ತಿದ್ದರೆಂದು ಗೊತ್ತಾಗಿದೆ.ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆಎಂದು ಪೊಲೀಸರು ತಿಳಿಸಿದ್ದಾರೆ.

 

 

 

error: Content is protected !!
Scroll to Top