ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ನಿವಾಸದ ಮೇಲೆ ಐಟಿ ದಾಳಿ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.10 ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರದುರ್ಗ ನಗರದ ಹೊರವಲಯದ ಬೆಂಗಳೂರು ಮಾರ್ಗದ ಎನ್.ಹೆಚ್. 4 ಬಳಿಯ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ.

ದಾಳಿ ಸಂದರ್ಭದಲ್ಲಿ ಮತದಾರರಿಗೆ ಹಂಚಲು ಪ್ಯಾಕ್ ಮಾಡಿ ಇಟ್ಟಿದ್ದ 50 ಲಕ್ಷ ರೂ.ಗಳು ಹಾಗೂ 8.83 ಲಕ್ಷ ಮೌಲ್ಯದ ಬಿಡಿಬಿಡಿ ನೋಟುಗಳು ಸೇರಿದಂತೆ ಒಟ್ಟು 58,83,000 ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ. 239 ಲೀಟರ್ ನಷ್ಟು ಮದ್ಯದ ಬಾಟಲ್ ಗಳು ಹಾಗೂ 9 ಲೀಟರ್ ಐಎಂಎಲ್ ದೊರೆತಿದೆ.ಐಟಿ ಅಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ಸ್ಥಳದಲ್ಲಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Also Read  ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ     ➤ ದ.ಕ, ಉಡುಪಿಯಿಂದ 49,975 ವಿದ್ಯಾರ್ಥಿಗಳು ಪರೀಕ್ಷೆಗೆ

 

 

 

 

error: Content is protected !!
Scroll to Top