ಇಬ್ಬರು ಮಕ್ಕಳು ಕೃಷಿ‌ ಹೊಂಡದಲ್ಲಿ ಈಜಲು ಹೋಗಿ ನೀರುಪಾಲು..!

(ನ್ಯೂಸ್ ಕಡಬ)Newskadaba.com ದಾವಣಗೆರೆ,ಮೇ.09 ಚನ್ನಗಿರಿ ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ಇಬ್ಬರು ಮಕ್ಕಳು ಕೃಷಿ‌ ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ನಡೆದಿದೆ. ಗಣೇಶ್ (16), ಹೇಮಂತ್ (15) ಮೃತ ಮಕ್ಕಳು ಎಂದು ಗುರುತಿಸಲಾಗಿದೆ.

ಎಸ್ಸೆಸ್ಸೆಲ್ಸಿ ಓದುತ್ತಿದ್ದ ಗಣೇಶ್‌ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದ. ದೋಣಿಹಳ್ಳಿ ಶಾಲೆಗೆ ಈತನೇ ಪ್ರಥಮ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದ. ಹೇಮಂತ್ 9ನೇ ತರಗತಿ ತೇರ್ಗಡೆಗೊಂಡು‌ ಎಸ್ಸೆಸ್ಸೆಲ್ಸಿಗೆ ದಾಖಲಾಗಬೇಕಿತ್ತು. ಗ್ರಾಮದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Also Read  ಕೊರೋನಾ: ಭಯಬೇಡ, ಎಚ್ಚರವಿರಲಿ ➤ ಪ್ರಯಾಣದ ವೇಳೆ ಮಾಡಬಾಹುದಾದ ಮುಂಜಾಗ್ರತಾ ಕ್ರಮಗಳು

 

 

 

 

error: Content is protected !!
Scroll to Top