ಬಿಜೆಪಿ ನಾಯಕನನ್ನು ಗುಂಡಿಟ್ಟು ಹತ್ಯೆ ಮಾಡಿದ ದುಷ್ಕರ್ಮಿಗಳು..!

(ನ್ಯೂಸ್ ಕಡಬ)Newskadaba.com ಗುಜರಾತ್,ಮೇ.09 ಭಾರತೀಯ ಜನತಾ ಪಕ್ಷದ ವಾಪಿ ತಾಲೂಕಾ ಉಪಾಧ್ಯಕ್ಷ ಶೈಲೇಶ್ ಪಟೇಲ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ.ಶೈಲೇಶ್ ಪಟೇಲ್ ಗುಜರಾತ್ನ ವಲ್ಸಾದ್ ಜಿಲ್ಲೆಯ ವಾಪಿಯ ಕೊಚಾರ್ವಾ ಗ್ರಾಮದವರಾಗಿದ್ದಾರೆ. ವಾಪಿ ಪಟ್ಟಣದ ಸಮೀಪವಿರುವ ದೇವಸ್ಥಾನಕ್ಕೆ ತೆರಳಿದ್ದ ಪತ್ನಿ ಹಿಂದಿರುಗುವಿಕೆಗಾಗಿ ಶೈಲೇಶ್ ಅವರು ಎಸ್ಯುವಿಯಲ್ಲಿ ಕಾದು ಕುಳಿತಿದ್ದರು.

ಈ ವೇಳೆ ಬೈಕ್ ನಲ್ಲಿ ಬಂದಿರುವ ಅಪರಿಚಿತ ವ್ಯಕ್ತಿಗಳು ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಬಂದಿರುವ ದುಷ್ಕರ್ಮಿಗಳು ಶೈಲೇಶ್ ಅವರ ಮೇಲೆ 3-4 ಗುಂಡುಗಳನ್ನು ಹಾರಿಸಿದ್ದಾರೆಂದು ತಿಳಿಸಿದ್ದಾರೆ.

Also Read  ಮಂಗಳೂರು : ಕ್ರೆಡಿಟ್ ಕಾರ್ಡ್ ಮರುನೋಂದಣಿ ನೆಪದಲ್ಲಿ 1.37 ಲಕ್ಷ.ರೂ ವಂಚನೆ

ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಶೈಲೇಶ್ ಅವರ ಪತ್ನಿ ದೇಗುಲದಿಂದ ಹೊರಬಂದಿದ್ದು, ಈ ವೇಳೆ ಇಬ್ಬರು ಮುಸುಕುಧಾರಿ ಯುವಕರು ಬೈಕ್ನಲ್ಲಿ ಪರಾರಿಯಾಗುತ್ತಿರುವುದನ್ನು ನೋಡಿಸಿದ್ದಾರೆ. ಬಳಿಕ ಪತಿ ರಕ್ತದ ಮಡುವಿನಲ್ಲಿ ಬಿದ್ದಿಸುವುದನ್ನು ಕಂಡು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶೈಲೇಶ್ ಮೃತಪಟ್ಟಿದ್ದಾರೆ.

 

 

 

 

 

error: Content is protected !!
Scroll to Top