(ನ್ಯೂಸ್ ಕಡಬ) newskadaba.com. ಮಂಗಳೂರು, ಮೇ.9. ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಅಬಕಾರಿ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಎ.26ರಿಂದ ಮೇ 7ರವರೆಗೆ ಒಟ್ಟು 797 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಈ ದಾಳಿಯಲ್ಲಿ 17 ಗಂಭೀರ ಪ್ರಕರಣಗಳು ದಾಖಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಇನ್ನು 866.755 ಲೀ ಐಎಂಎಲ್, 50.250 ಲೀ. ಬಿಯರ್, 22.750 ಲೀ. ಗೋವಾ ಮದ್ಯ, 200 ಲೀ. ಗೇರುಹಣ್ಣು ಕೊಳೆ, 875 ಲೀ. ಶೇಂದಿ, 8 ವಾಹನಗಳು, 600 ಗ್ರಾಂ ಗಾಂಜಾ ಜಪ್ತಿ ಮಾಡಿದೆ.