ವಿವಾಹವಾಗಿ 15 ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂದು ಮಹಿಳೆಗೆ ವಿಷ ಉಣಿಸಿ ಹತ್ಯೆ

(ನ್ಯೂಸ್ ಕಡಬ)newskadaba.com ಉತ್ತರಪ್ರದೇಶ, ಮೇ.09.  ಮದುವೆಯಾಗಿ 15 ವರ್ಷಗಳಾದರೂ ಮಗುವಾಗಿಲ್ಲ ಎಂದು 33 ವರ್ಷದ ಮಹಿಳೆಗೆ ಅತ್ತೆ ವಿಷ ಆಹಾರ ನೀಡಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.

ಸಾಲಿ ಬೇಗಂ ಎಂದು ಗುರುತಿಸಲಾದ ಮಹಿಳೆ ಮೃತರು ಎಂದು ಗುರುತಿಸಲಾಗಿದೆ. ಈಕೆಯ ಅತ್ತೆ, ಮಗುವಾಗದಿದ್ದಕ್ಕಾಗಿ ಅವಳ ಜೊತೆ ಜಗಳವಾಡಿ ವಿಷ ಆಹಾರ ನೀಡಿ ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಮೃತಳ ಸಹೋದರ ಗೌಸ್ ಮೊಹಮ್ಮದ್ ತನ್ನ ದೂರಿನಲ್ಲಿ, ಬೇಗಂ 15 ವರ್ಷಗಳ ಹಿಂದೆ ಫಿರೋಜ್ ಅಹ್ಮದ್ ಎಂಬಾತನನ್ನು ಮದುವೆಯಾಗಿದ್ದಳು ಮತ್ತು ಆಕೆಯ ಅತ್ತೆ ಮಗುವನ್ನು ಹೆರಲು ವಿಫಲವಾದ ಕಾರಣ ಆಗಾಗ್ಗೆ ಅವಳೊಂದಿಗೆ ಜಗಳವಾಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Also Read  ಕೈಕಂಬ: ಓವರ್ ಟೇಕ್ ಮಾಡುವ ಸಂದರ್ಭ ಬೈಕ್ ಸ್ಕಿಡ್ ➤ ಯುವಕ ಸ್ಥಳದಲ್ಲೇ ಮೃತ್ಯು..!

 

error: Content is protected !!
Scroll to Top