ಗ್ಯಾಂಗ್‌ಸ್ಟರ್‌ ಟಿಲ್ಲು ತಾಜ್‌ಪುರಿ ಹತ್ಯೆ ಪ್ರಕರಣ ➤7 ಮಂದಿ ಪೊಲೀಸ್ ಸಿಬ್ಬಂದಿ ಅಮಾನತು.!

(ನ್ಯೂಸ್ ಕಡಬ)Newskadaba.com ಹೊಸದಿಲ್ಲಿ,ಮೇ.09 ತಿಹಾರ್‌ ಜೈಲಿನಲ್ಲಿ ಗ್ಯಾಂಗ್‌ಸ್ಟರ್‌ ಟಿಲ್ಲು ತಾಜ್‌ಪುರಿಯಾನನ್ನು ಸಹಕೈದಿಗಳು ಇರಿದು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ವಿಶೇಷ ಪೊಲೀಸ್‌ ಪಡೆಯ ಏಳು ಸಿಬಂದಿಯನ್ನು ಅಮಾನತುಗೊಳಿಸಲಾಗಿದೆ.

ಘಟನೆ ನಡೆದ ವೇಳೆ ಈ ಏಳು ಮಂದಿ ಪೊಲೀಸ್‌ ಸಿಬಂದಿ ಜೈಲಿನ ಭದ್ರತೆಯ ಕರ್ತವ್ಯದಲ್ಲಿದ್ದರು. ಇವರ ಕಣ್ಣೆದುರೇ ಟಿಲ್ಲು ತಾಜ್‌ಪುರಿಯಾನ ಮೇಲೆ ಸಹಕೈದಿಗಳು ಹಲ್ಲೆ ನಡೆಸುತ್ತಿದ್ದರೂ ಇವರು ಮೂಕಪ್ರೇಕ್ಷಕರಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇವರನ್ನು ಅಮಾನತುಗೊಳಿಸಿ ತಮಿಳುನಾಡಿಗೆ ಕಳುಹಿಸಿಕೊಡಲಾಗಿದೆ.

Also Read  ಪೊಲೀಸ್‌ ಜೀಪ್‌ ಮೇಲೆ ಹತ್ತಿ ರೀಲ್ಸ್‌ ಮಾಡಿದ ಯುವಕರು.!

 

 

 

error: Content is protected !!
Scroll to Top