SSLC ಪೂರಕ ಪರೀಕ್ಷೆ ನೋಂದಣಿಗೆ ಮೇ.15 ರವರೆಗೆ ಅವಕಾಶ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.08. ಈ ಸಾಲಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮರು ಮೌಲ್ಯ ಮಾಪನ ಮಾಡಲು ಮೇ.15 ರಿಂದ ಮೇ.21 ರವರೆಗೆ ಅವಕಾಶವಿದೆ. ಪೂರಕ ಪರೀಕ್ಷೆ ನೋಂದಣಿಗೆ ಮೇ.08 ರಿಂದ ಮೇ. 15 ರವರೆಗೆ ಅವಕಾಶ ನೀಡಲಾಗಿದೆ.


ಈ ಬಾರಿ ರಾಜ್ಯದಲ್ಲಿ ಶೇ. 83.8 ಮಂದಿ ಉತ್ತೀರ್ಣರಾಗಿದ್ದು, ಈ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯು (ಶೇ.96.8) ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಮಂಡ್ಯ ಜಿಲ್ಲೆ ಎರಡನೇ ಸ್ಥಾನ (96.74) ಪಡೆದು ಕೊಂಡಿದ್ದು, ಮೂರನೇ ಸ್ಥಾನ ಹಾಸನ ಜಿಲ್ಲೆ (96.68) ಪಡೆದಿದೆ.

Also Read  ದೇವರ ದರ್ಶನಕ್ಕೆ ಮಾತ್ರ ಅವಕಾಶ: ಸಚಿವ ಕೋಟ

error: Content is protected !!
Scroll to Top