ಮತದಾರರಿಗೆ ಹಂಚಲು ತೋಟದ ಮನೆಯಲ್ಲಿ ಇಟ್ಟಿದ್ದ 1800 ಕುಕ್ಕರ್ ಜಪ್ತಿ.! ➤ದೂರು ದಾಖಲು * 

(ನ್ಯೂಸ್ ಕಡಬ)Newskadaba.com ಬೆಳಗಾವಿ,ಮೇ.08 ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಡಸಲೂರ ಗ್ರಾಮ ಕುಕ್ಕರ್ ಜಪ್ತಿಯಾಗಿತ್ತು. ಈ ಕುಕ್ಕರ್​ಗಳು ರಾಮದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಎಂಬುವವರಿಗೆ ಸೇರಿದ್ದು ಕೊನೆಯ ಹಂತದಲ್ಲಿ ಮತದಾರರಿಗೆ ಹಂಚಲು ಕಾರ್ಯಕರ್ತರ ತೋಟದ ಮನೆಯಲ್ಲಿ ಚಿಕ್ಕರೇವಣ್ಣ ಇಟ್ಟಿದ್ದರು ಎನ್ನಲಾಗಿತ್ತು.

ಕಾರ್ಯಕರ್ತ ಬೀರಪ್ಪ ಎಂಬುವವರ ಮೂಲಕ ಚನ್ನಪ್ಪ ಎಂಬುವವರ ತೋಟದ ಮನೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ದಾಸ್ತಾನನ್ನು ಇಡಲಾಗಿತ್ತು. ಇದರ ಬಗ್ಗೆ ಮಾಹಿತಿ ಪಡೆದ ಮುರಗೋಡ ಪೊಲೀಸರು, ತಡರಾತ್ರಿ ದಾಳಿ ನಡೆಸಿದಾಗ 1800 ಕುಕ್ಕರ್​ಗಳು ಪತ್ತೆಯಾಗಿದ್ದು ಅವುಗಳನ್ನು ಜಪ್ತಿ ಮಾಡಲಾಗಿದೆ.ಸದ್ಯ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ, ಬೀರಪ್ಪ ಮತ್ತು ಚನ್ನಪ್ಪ ಮೂವರ ವಿರುದ್ಧ ಕೇಸ್ ದಾಖಲಾಗಿದೆ.

Also Read  ಕಡಬ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ► ಬಿಜೆಪಿ ಶಕ್ತಿ ಕೇಂದ್ರದಿಂದ ಸ್ವಚ್ಚತಾ ಕಾರ್ಯಕ್ರಮ

 

 

error: Content is protected !!
Scroll to Top