ಭಾರತೀಯ ವಾಯುಪಡೆಯ MiG-21 ಯುದ್ಧ ವಿಮಾನ ಪತನ..!➤ಮೂವರು ಮೃತ್ಯು

(ನ್ಯೂಸ್ ಕಡಬ)Newskadaba.com ವದೆಹಲಿ,ಮೇ.08 ಭಾರತೀಯ ವಾಯುಪಡೆಯ MiG-21 ಯುದ್ಧ ವಿಮಾನ ರಾಜಸ್ಥಾನದ ಹನುಮಾನ್‌ಗಢ ಬಳಿ ಪತನಗೊಂಡಿದೆ. ಇದು ಮನೆಯೊಂದರ ಮೇಲೆ ಬಿದ್ದಿದೆ. ಇದರ ಪರಿಣಾಮ ಮೂವರು ಗ್ರಾಮಸ್ಥರು ಮೃತಪಟ್ಟಿದ್ದಾರೆ.ಈ ವಿಮಾನ ಸೂರತ್‌ಗಢದಿಂದ ಟೇಕಾಫ್ ಆಗಿತ್ತು.ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ ಪತನಗೊಂಡಿದೆ.

ತಾಂತ್ರಿಕ ದೋಷದಿಂದಾಗಿ ವಿಮಾನವು ಹನುಮಾನ್‌ಗಢ್ ಜಿಲ್ಲೆಯ ಪಿಲಿಬಂಗಾ ಬಳಿ ಪತನಗೊಂಡಿದೆ.ಪೈಲಟ್ ಮತ್ತು ಸಹ ಪೈಲಟ್ ಸಕಾಲದಲ್ಲಿ ವಿಮಾನದಿಂದ ಜಿಗಿದರು ಮತ್ತು ಪ್ಯಾರಾಚೂಟ್ ಸಹಾಯದಿಂದ ಡ್ರೈನ್ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿದಿದ್ದಾರೆ. ಆದರೆ, ವಿಮಾನ ಮನೆಯೊಂದರ ಮೇಲೆ ಬಿದ್ದಿದ್ದು, ಮಹಿಳೆ ಮತ್ತು ಪುರುಷ ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಫೆ. 17 ರಂದು ರಾಜ್ಯ ಬಜೆಟ್ ಮಂಡನೆ ➤  ಕಲ್ಯಾಣ ಕರ್ನಾಟಕಕ್ಕೆ ಬಂಪರ್ ಘೋಷಣೆ !

 

 

error: Content is protected !!
Scroll to Top