ಪೊಲೀಸರಿಗೇ ತಟ್ಟಿದ ಸರಗಳ್ಳರ ಹಾವಳಿ ► ಪೊಲೀಸ್ ಇನ್ಸ್‌ಪೆಕ್ಟರ್ ಪತ್ನಿಯ ಮಾಂಗಲ್ಯ ಸರವನ್ನೇ ಕಿತ್ತೊಯ್ದ ಖದೀಮರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.15. ರಾಜ್ಯ ರಾಜಧಾನಿಯಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಸೋಮವಾರದಂದು ಒಂದು ಹೆಜ್ಜೆ ಮುಂದುವರಿದು ಪೊಲೀಸ್ ಇನ್ಸ್‌ಪೆಕ್ಟರ್ ಪತ್ನಿಯ ಮಾಂಗಲ್ಯ ಸರವನ್ನೇ ಎಗರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಡಿಜಿ ಕಛೇರಿಯಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಕೆಂಚೇಗೌಡ ಎಂಬವರ ಪತ್ನಿ ಗಂಗಮ್ಮ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗೇಟಿನ ಎದುರು ರಂಗೋಲಿ ಹಾಕಿ‌ ಒಳ ಬರುವಾಗ ಆಗಂತುಕನೊಬ್ಬ ಆಗಮಿಸಿ ಮಾಂಗಲ್ಯ ಸರವನ್ನು ಎಳೆದಿದ್ದಾನೆ. ಈ ಸಂದರ್ಭದಲ್ಲಿ ವಿರೋಧಿಸಿದ ಗಂಗಮ್ಮರನ್ನು ನೆಲಕ್ಕೆ ಎಳೆದು ಸರದೊಂದಿಗೆ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಷ್ಟು ದಿನ ಸಾರ್ವಜನಿಕರಿಂದ ಸರ ಎಗರಿಸುತ್ತಿದ್ದ ಖದೀಮರು ಇದೀಗ ಪೊಲೀಸರ ಮನೆಯವರನ್ನೇ ಬಿಟ್ಟಿಲ್ಲ.

Also Read  Breaking | ಕಡಬ: ನಾಯಿಯನ್ನು ಅಟ್ಟಿಸಿಕೊಂಡು ಶೌಚಾಲಯಕ್ಕೆ ನುಗ್ಗಿದ ಚಿರತೆ

error: Content is protected !!
Scroll to Top