ಹೌಸ್ ಬೋಟ್ ಮುಳುಗಡೆ..! ➤ ಮಕ್ಕಳು ಸೇರಿ 21 ಮಂದಿ ಮೃತ್ಯು

(ನ್ಯೂಸ್ ಕಡಬ)Newskadaba.com ಕೇರಳ,ಮೇ.08  ಕೇರಳದ ಮಲಪ್ಪುರಂ ಜಿಲ್ಲೆಯ ತನೂರ್ ಪ್ರದೇಶದ ತುವಲ್ತಿರಾಮ್ ಬೀಚ್ ಬಳಿ ಸುಮಾರು 30 ಪ್ರಯಾಣಿಕರಿದ್ದ ಹೌಸ್ ಬೋಟ್ ಪಲ್ಟಿಯಾಗಿ ಮುಳುಗಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 20 ಮಂದಿ ಮೃತ ಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತನೂರ್ ಕರಾವಳಿ ಬಳಿ ಪ್ರವಾಸಿ ದೋಣಿ ಮಗುಚಿ ಬಿದ್ದಿದೆ.ಈ ಘಟನೆ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ದೋಣಿಯಲ್ಲಿದ್ದವರೆಲ್ಲರೂ ಪ್ರವಾಸಿಗರಾಗಿದ್ದಾರೆ.ಇದುವರೆಗೆ 21 ಮೃತದೇಹಗಳನ್ನು ಹೊರತೆಗೆಯಲಾಗಿದೆ. ದೋಣಿಯಲ್ಲಿ ಎಷ್ಟು ಜನರು ಇದ್ದರು ಎಂಬುದು ನಿಖರವಾಗಿ ತಿಳಿದಿಲ್ಲ ,ಕಂಡುಹಿಡಿಯಲು ಹುಡುಕಾಟವನ್ನು ಮುಂದುವರೆಸಿದ್ದೇವೆ ಎಂದು ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಶಿಜು ಕೆಕೆ ತಿಳಿಸಿದ್ದಾರೆ.

Also Read  'ಕೇಂದ್ರ ಸರ್ಕಾರದ’ ಮಹತ್ವದ ಘೋಷಣೆ ➤  ಉದ್ಯೋಗ 'ವಯೋಮಿತಿ' 15ನೇ ವರ್ಷಕ್ಕೆ ಇಳಿಕೆ

 

 

 

 

error: Content is protected !!
Scroll to Top