➤ಹಜ್‌ ಯಾತ್ರೆಗೆ ಮಂಗಳೂರಿನಿಂದ ನೇರ ವಿಮಾನ ಯಾನ ರದ್ದು

(ನ್ಯೂಸ್ ಕಡಬ) newskadaba.com. ಮಂಗಳೂರು, ಮೇ.6.  ಪ್ರಸಕ್ತ ಸಾಲಿನ ಪವಿತ್ರ ಹಜ್‌ ಯಾತ್ರೆಗಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ನೇರ ಪ್ರಯಾಣ ಅವಕಾಶವನ್ನು ರದ್ದುಪಡಿಸಲಾಗಿದೆ.

ಕೋವಿಡ್‌ ಸಾಂಕ್ರಾಮಿಕದ ಬಳಿಕ ಮತ್ತೆ ಮಂಗಳೂರು ವಿಮಾನ ನಿಲ್ದಾಣದಿಂದ ಹಜ್‌ ಯಾತ್ರೆಗೆ ತೆರಳಲು ಯಾತ್ರಿಗಳಿಗೆ ಅವಕಾಶ ಕಲ್ಪಿಸ ಲಾಗಿತ್ತು. ಹಜ್‌ ಯಾತ್ರೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿಯೂ ಯಾತ್ರಿ ಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಮಾನ ಹತ್ತುವ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಭಾರತೀಯ ಹಜ್‌ ಸಮಿತಿಯು ದೇಶದ ಹಲವಾರು ರಾಜ್ಯ ಗಳಲ್ಲಿನ ವಿಮಾನ ಹತ್ತುವ ಕೇಂದಗಳನ್ನು (ಎಂಬಾರ್ಕೇಶನ್‌ ಸೆಂಟರ್‌) ರದ್ದು ಪಡಿಸಿದ್ದು, ಇದರಲ್ಲಿ ಮಂಗಳೂರು ವಿಮಾನ ನಿಲ್ದಾಣ ಸಹ ಸೇರಿದೆ.

Also Read  ಕರಾವಳಿಯಲ್ಲಿ ಮುಂಗಾರು ಅಬ್ಬರ ➤ ಹೆಚ್ಚುತ್ತಿದೆ ಗುಡುಗು ಮಿಂಚಿನ ಆರ್ಭಟ

ಕಳೆದ ವರ್ಷ ಕೋವಿಡ್‌ ಕಾರಣದಿಂದ ಮಂಗಳೂರಿನಿಂದ ನೇರವಾಗಿ ಹಜ್‌ ಯಾತ್ರೆಗೆ ಅವಕಾಶ ಕಲ್ಪಿಸಿರಲಿಲ್ಲ. ಈ ಸಲ ಮಂಗಳೂರಿನಿಂದ ನೇರವಾಗಿ ಯಾತ್ರೆ ಕೈಗೊಳ್ಳಲು ಅವಕಾಶ ನೀಡುವಂತೆ ಅ. ಭಾ. ಹಜ್‌ ಸಮಿತಿಯನ್ನು ಕೋರಲಾಗಿತ್ತು. ಆದರೆ ಯಾತ್ರಿಕರು ಹೊರಡುವ ಸ್ಥಳಗಳ ಪಟ್ಟಿಯಿಂದ ಮಂಗಳೂರನ್ನು ಸಮಿತಿ ಕೈಬಿಟ್ಟಿದೆ ಎನ್ನಲಾಗಿದೆ.

error: Content is protected !!
Scroll to Top