ಬಾರಾಮುಲ್ಲಾದಲ್ಲೂ ಎನ್‌ಕೌಂಟರ್ ➤ ಓರ್ವ ಭಯೋತ್ಪಾದಕ ಹತ್ಯೆ

(ನ್ಯೂಸ್ ಕಡಬ) newskadaba.com. ಜಮ್ಮುಕಾಶ್ಮೀರ,ಮೇ.6.  ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ದಾಳಿ ನಡೆಯುತ್ತಿದೆ. ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ.

ಶನಿವಾರ ಮುಂಜಾನೆ ಆರಂಭವಾದ ಬಾರಾಮುಲ್ಲಾ ದ ಕರ್ಹಾಮಾ ಕುಂಜರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ದಾಳಿ ಮುಂದುವರಿದಿದ್ದು, ಭಯೋತ್ಪಾದಕರನ್ನು ಮಟ್ಟ ಹಾಕಲು ಪೊಲೀಸರು ಮತ್ತು ಭದ್ರತಾ ಪಡೆಗಳು ಒಟ್ಟಾಗಿ ಕಾರ್ಯಾಚರಣೆ ನಡೆಸುತ್ತಿವೆ. ಕಾಶ್ಮೀರ ವಲಯ ಪೊಲೀಸರು ನೀಡಿದ ಮಾಹಿತಿಯಂತೆ ಬಾರಾಮುಲ್ಲಾ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಜಮ್ಮು ವಲಯದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಜಮ್ಮುವಿಗೆ ಭೇಟಿ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Also Read  ಹೊಸ ದಾಖಲೆ ನಿರ್ಮಿಸಿದ ಯುಪಿಐ ಪಾವತಿ- ದೇಶದಲ್ಲಿ 200 ಲಕ್ಷ ಕೋಟಿ ರೂಗೆ ಏರಿಕೆ

ರಾಜೌರಿಯಲ್ಲಿ 5 ಯೋಧರು ಹುತಾತ್ಮರಾಗಿದ್ದರು.ಶುಕ್ರವಾರ ಮುಂಜಾನೆ, ರಾಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ಸ್ಫೋಟದಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಭಯೋತ್ಪಾದಕರನ್ನು ಹೊಡೆದುರುಳಿಸುವ ಕಾರ್ಯಾಚರಣೆ ನಡೆಯುತ್ತಿರುವ ರಾಜೌರಿಯ ದಟ್ಟ ಅರಣ್ಯದ ಕಾಂಡಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ.

error: Content is protected !!
Scroll to Top