ಮೌಲ್ಯಮಾಪನ ಕಾರ್ಯ ಪೂರ್ಣ – ಎಸೆಸ್ಸೆಲ್ಸಿ ಫಲಿತಾಂಶ ಶೀಘ್ರ

(ನ್ಯೂಸ್ ಕಡಬ) newskadaba.com. ಬೆಂಗಳೂರು, ಮೇ.6.

ಎಸೆಸ್ಸೆಲ್ಸಿ ಫಲಿತಾಂಶ ಮೇ.11 ಅಥವಾ 12ರಂದು ಪ್ರಕಟವಾಗುವ ಸಾಧ್ಯತೆಯಿದೆ ಎಂದು ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿವೆ. ಆ ಮೂಲಕ ಚುನಾವಣಾ ಫಲಿತಾಂಶದ ಮೊದಲೇ ಪರೀಕ್ಷಾ ಫಲಿತಾಂಶ ಹೊರಬೀಳುವುದು ಬಹುತೇಕ ಖಚಿತ. ಮೌಲ್ಯ ಮಾಪನ ಕಾರ್ಯ ಸಂಪೂರ್ಣ ಮುಗಿದಿದ್ದು ಮತ್ತೊಮ್ಮೆ ಉತ್ತರ ಪತ್ರಿಕೆಗಳು ಪರಿಶೀಲನೆ ನಡೆಯುತ್ತಿದೆ.

ಈ ಬಾರಿ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಮಾ.31ರಿಂದ ಏ.15ರವರೆಗೆ ಒಟ್ಟು 3305 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

Also Read  ಮಂಗಳೂರು: ಡಿ. 26ರಿಂದ KSRTC ಬಸ್ ಗಳ ಸಂಚಾರದಲ್ಲಿ ವ್ಯತ್ಯಯ

 

error: Content is protected !!
Scroll to Top