➤ ರಾಜ್ಯಸ್ಥಾನ ವಿಷಾನಿಲದಿಂದ ಮೂವರು ಮೃತ್ಯು..

(ನ್ಯೂಸ್ ಕಡಬ) newskadaba.com. ರಾಜಸ್ಥಾನ, ಮೇ.6. ಮದುವೆ ಹಾಲ್​ವೊಂದರ ಒಳಚರಂಡಿ ಚೇಂಬರ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಮೂವರು ಯುವಕರು ಸಾವಿಗೀಡಾಗಿರುವ ಘಟನೆ ರಾಜಸ್ಥಾನದ ಪಾಲಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.ಸ್ವಚ್ಛ ಮಾಡುತ್ತಿದ್ದ ವೇಳೆ ವಿಷಾನಿಲದಿಂದ ಯುವಕರು ಮೃತಪಟ್ಟಿದ್ದಾರೆ ಎಂದು ಪೊಲೀಸ​ರು ತಿಳಿಸಿದ್ದಾರೆ.

ಇದೇ ವೇಳೆ ಯುವಕನೊಬ್ಬ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿಯ ಮೇರೆಗೆ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಂಗಾರ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಮೂವರು ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ.

ಪಾಲಿ ನಗರದ ಸೆಂಚುರಿಯನ್ ಮ್ಯಾರೇಜ್ ಗಾರ್ಡನ್‌ನಲ್ಲಿ ತ್ಯಾಜ್ಯ ಸುರಿಯಲು ಬಸ್ ನಿಲ್ದಾಣದ ಬಳಿ ಒಳಚರಂಡಿ ಚೇಂಬರ್ (ತೊಟ್ಟಿ) ನಿರ್ಮಿಸಲಾಗಿದೆ. ಅದು ಭರ್ತಿಯಾಗಿದ್ದು ಮದುವೆ ಹಾಲ್ ನಿರ್ವಾಹಕರು ಸುರಕ್ಷತಾ ಪರಿಕರಗಳಿಲ್ಲದೆ ನಾಲ್ವರು ಕಾರ್ಮಿಕರನ್ನು ಕರೆಯಿಸಿಕೊಂಡು ಸ್ವಚ್ಛ ಮಾಡಲು ತಿಳಿಸಿದ್ದಾರೆ ಎನ್ನಲಾಗಿದೆ. ಕಾರ್ಮಿಕರು ತೊಟ್ಟಿಗೆ ಇಳಿದು ಸ್ಚಚ್ಛತೆಗೆ ಇಳಿದಾಗ ಒಳಚರಂಡಿ ಚೇಂಬರ್‌ನಲ್ಲಿ ತ್ಯಾಜ್ಯದಿಂದ ಉತ್ಪತ್ತಿಯಾದ ವಿಷಕಾರಿ ಅನಿಲದಿಂದ ದುರಂತ ಸಂಭವಿಸಿದೆ. ಉಸಿರಾಟದ ತೊಂದರೆಯಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

error: Content is protected !!