ಕರ್ನಾಟಕದವರು ಹರಾಮಿಗಳು ಎಂದು ವಿವಾದ ಸೃಷ್ಟಿಸಿದ ಗೋವಾ ನೀರಾವರಿ ಸಚಿವ

(ನ್ಯೂಸ್ ಕಡಬ) newskadaba.com ಬೆಳಗಾವಿ, ಜ.14. ಕರ್ನಾಟಕದವರು ಹರಾಮಿಗಳು, ಅವರು ಏನು ಬೇಕಾದರೂ ಮಾಡಬಹುದು. ಹೀಗಾಗಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಮಹದಾಯಿ ಕಾಮಗಾರಿ ಪರಿಶೀಲನೆಗಾಗಿ ಕರ್ನಾಟಕಕ್ಕೆ ಆಗಮಿಸಿದ್ದೇನೆ ಎಂದು ಗೋವಾ ನೀರಾವರಿ ಸಚಿವ ವಿನೋದ್ ಪಾಳೇಕರ್ ಉದ್ದಟತನದ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

ಗೋವಾ ರಾಜ್ಯದ ನೀರಾವರಿ ಸಚಿವ ಹಾಗೂ ಇಲಾಖೆಯ ಅಧಿಕಾರಿಗಳು ಖಾನಾಪುರ ತಾಲೂಕಿನ ಮಹದಾಯಿ ಉಗಮ ಸ್ಥಾನವಾದ ಕಣಕುಂಬಿಗೆ ಬಿಗಿ ಪೊಲೀಸ್ ಭದ್ರತೆಯ ಮಧ್ಯೆ ಆಗಮಿಸಿ ಅಲ್ಲಿನ ಕಾಮಗಾರಿ ಪರಿಶೀಲನೆ ನಡೆಸಿ ಅವಹೇಳನಕಾರಿ ಹೇಳಿಕೆ‌ ನೀಡಿದ್ದರು. ಗೋವಾ ನೀರಾವರಿ ಸಚಿವ ಪಾಳೇಕರ್ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಈ ಮಧ್ಯೆ ಗೋವಾ ಸಚಿವ ಪಾಳೇಕರ್ ಹೇಳಿಕೆಗೆ ಕನ್ನಡಪರ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ಶ್ರೀ ಆಂಜನೇಯಸ್ವಾಮಿ ನೆನೆಯುತ್ತಾ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳಿ ಕಷ್ಟಗಳಿಂದ ಮುಕ್ತಿ ಪಡೆಯಿರಿ

error: Content is protected !!
Scroll to Top