ಗೆಳತಿಯನ್ನೇ ಹತ್ಯಗೈದ ಪಾಪಿ ಸ್ನೇಹಿತ..!

(ನ್ಯೂಸ್ ಕಡಬ)Newskadaba.comಕೇರಳ,ಮೇ.05 26 ವರ್ಷದ ಮಹಿಳೆಯನ್ನು ಸ್ನೇಹಿತನೇ ಕೊಲೆ ಮಾಡಿ, ಶವವನ್ನು ಕಾಡಿನಲ್ಲಿ ಬಿಸಾಕಿರುವ ಘಟನೆ ಕೇರಳದಲ್ಲಿ ನಡೆದಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಘಟನೆಯು ನಡೆದಿದೆ ಎನ್ನಲಾಗಿದ್ದು, ಮಹಿಳೆಯ ಶವ ತ್ರಿಸ್ಸೂರ್ ಜಿಲ್ಲೆಯ ಚಾಲಾಕುಡಿಯ ತುಂಬುರ್ ಮೂಜಿ ಕಾಡಿನಲ್ಲಿ ದೊರೆತಿದೆ.

ಮಹಿಳೆಯನ್ನು ಅಥಿರಾ ಎಂದು ಗುರುತಿಸಲಾಗಿದ್ದು, ತನ್ನ ಸ್ನೇಹಿತನಾದ ಅಖಿಲ್ ಗೆ ಸಾಲವನ್ನು ನೀಡಿದ್ದಳು. ಅಲ್ಲದೆ, ಅಖಿಲ್ ಈ ಹಣವನ್ನು ಕಂತಿನ ರೂಪದಲ್ಲಿ ಮರುಳಿಸುತ್ತಿದ್ದ ಎನ್ನಲಾಗಿದೆ. ಈ ನಡುವೆ ಅಥಿರಾ ಯಾವಾಗ ಹಣವನ್ನು ಒಮ್ಮೆಲೇ ನೀಡುವಂತೆ ದುಂಬಾಲು ಬಿದ್ದಳೋ, ಹಣವನ್ನು ಹಿಂದಿರುಗಿಸಲಾಗದ ಕಾರಣದಿಂದ ಅಖಿಲ್ ಈ ಕೊಲೆಯನ್ನು ಮಾಡಿದ್ದಾನೆ ಎನ್ನಲಾಗಿದೆ.

Also Read  ಪಾಕ್‌ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ ಉಗ್ರ ಸಂಘಟನೆ ಮುಖ್ಯಸ್ಥನ ವಿರುದ್ಧ ಎಫ್ ಐಆರ್

 

error: Content is protected !!
Scroll to Top