ಮಗುವಿನ ಕತ್ತಿನಿಂದ ಚಿನ್ನದ ಸರ ಏಗರಿಸಿದ ಖದೀಮ..! ➤ದೂರು ದಾಖಲು

(ನ್ಯೂಸ್ ಕಡಬ)Newskadaba.com ಸುಳ್ಯ,ಮೇ.05 ಮದುವೆಯ ಕಾರ್ಯಕ್ರಮ ಒಂದರಲ್ಲಿ ಮಗು ಧರಿಸಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಮಗುವಿನ ತಂದೆ ದೂರು ನೀಡಿದ್ದಾರೆ. ಐವರ್ನಾಡು ಗ್ರಾಮದ ಮಡ್ತಿಲ ನಿವಾಸಿ ಶಿವಪ್ರಸಾದ್ ಎಂ.ಆರ್ ಎಂಬವರಸಂಬಂಧಿಕರ ಮದುವೆ ಕಾರ್ಯಕ್ರಮ ಸುಳ್ಯ ಕಾಯರ್ತೋಡಿ ದೇವಸ್ಥಾನ ಸಭಾಭವನದಲ್ಲಿ ನಡೆದಿದೆ.ಮದುವೆ ಸಮಾರಂಭಕ್ಕೆ ಪತ್ನಿ ಮತ್ತು 5 ವರ್ಷದ ಮಗು ಪೂರ್ವಿಕ್ ತೆರೆಳಿದ್ದೆವು. ಈ ಸಂದರ್ಭ ಕಳ್ಳತನ ನಡೆದಿದೆ ಎಂದು ತಿಳಿಸಿದ್ದಾರೆ.

ಸುಳ್ಯದಲ್ಲಿ ನಡೆದಿದ್ದ  ಮದುವೆ ಹಾಲ್ ನಲ್ಲಿ ಮಗ ನೀರು ಕುಡಿಯಲೆಂದು ಹೋದಾಗ ಲೋಟ ಮೇಲೆ ಇದ್ದ ಕಾರಣ ಆತನಿಗೆ ಸಿಗಲಿಲ್ಲ, ಅಲ್ಲಿದ್ದ ವ್ಯಕ್ತಿಯೊಬ್ಬರು ನಾನು ನೀರು ಕೊಡಿಸುತ್ತೇನೆ ಎಂದು ಅಲ್ಲಿಂದ ಹೊರಗೆ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಮಗುವಿನ ಕುತ್ತಿಗೆಯಲ್ಲಿದ 2 ಪವನ್ ತೂಕದ ಚಿನ್ನದ ಸರವನ್ನು ಹಾಗೂ ಅದಕ್ಕೆ ಅಳವಡಿಸಿದ್ದ ಪದಕ ಕಿತ್ತುಕೊಂಡು ಹೋಗಿದ್ದಾನೆ. ಈ ಘಟನೆ ಗೆ ಹೆದರಿ ಮಗು ಓಡಿ ಬಂದು ವಿಷಯ ತಿಳಿಸಿದ್ದಾನೆ..ಮಗುವಿನ ಕುತ್ತಿಗೆಯಿಂದ ಸರವನ್ನು ಎಳೆಯುವ ಸಂದರ್ಭ ಮಗುವಿಗೆ ಸಣ್ಣ ಗಾಯಗಳಾಗಿವೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Also Read  ಕಡಬ, ಪುತ್ತೂರು, ಸುಳ್ಯ ವ್ಯಾಪ್ತಿಯಲ್ಲಿ ಕೊರೋನಾ ಇಳಿಕೆ ➤ 24 ಗಂಟೆಗಳಲ್ಲಿ 158 ಮಂದಿಗೆ ಕೊರೋನಾ ಪಾಸಿಟಿವ್

 

.

 

error: Content is protected !!
Scroll to Top