ಬಸ್ ಹಾಗೂ ಕಾರು ಮಖಾಮುಖಿ ಡಿಕ್ಕಿ.! ➤ ಮೂವರು ಮೃತ್ಯು

(ನ್ಯೂಸ್ ಕಡಬ)Newskadaba.com ಯಾದಗಿರಿ,ಮೇ.05 ರಾಜ್ಯ ಹೆದ್ದಾರಿಯ ಮೂಡಬೂಳ ಕ್ರಾಸ್ ಹತ್ತಿರ ಬಸ್ ಹಾಗೂ ಕಾರಿನ ನಡುವೆ ಮಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಅಸುನೀಗಿದ್ದಾರೆ.ಸುರಪುರ ತಾಲ್ಲೂಕಿನ ರಂಗಂಪೇಟ ಗ್ರಾಮದ ನಾಗರಾಜ ಸಿದ್ದಣ್ಣ ಸಜ್ಜನ (60), ಮಹಾದೇವಿ ನಾಗರಾಜ ಸಜ್ಜನ (55), ಗ್ರಾಮದವರೇ ಆದ ರೇಣುಕಾ ನಾರಾಯಣರಾವ್ ಪಾಡಮುಖಿ (62) ಮೃತಪಟ್ಟವರು.

ಕಲಬುರಗಿಯಲ್ಲಿ ಸ್ನೇಹಿತನ ಮಗನ ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಪತ್ನಿಯೊಂದಿಗೆ ಕಾರು ಚಲಾಯಿಸಿಕೊಂಡು ನಾಗರಾಜ ಆಗಮಿಸುತ್ತಿದ್ದರು. ತಾಲ್ಲೂಕಿನ ಮುಡಬೂಳ ಕ್ರಾಸ್ ಬಳಿ ಶಹಾಪುರದಿಂದ ಕಲಬುರಗಿಗೆ ತೆರಳುತ್ತಿದ್ದ ಸಾರಿಗೆ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಅಸುನೀಗಿದ್ದಾರೆ. ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

Also Read  ಬಿಬಿಎ ಪದವಿ ಪರೀಕ್ಷೆ – ಅಂತಿಮ ರ್ಯಾಂಕ್ ಪಟ್ಟಿ

 

 

 

error: Content is protected !!
Scroll to Top