ಬೈಕ್ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ.! ➤ಯೂಟ್ಯೂಬರ್ ದುರಂತ ಅಂತ್ಯ

(ನ್ಯೂಸ್ ಕಡಬ)Newskadaba.comವದೆಹಲಿ,ಮೇ.05 ಯೂಟ್ಯೂಬ್​ ವಿಡಿಯೋಗಾಗಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಬೈಕ್​ ಓಡಿಸುವಾಗ ನಿಯಂತ್ರಣ ತಪ್ಪಿ ಡಿವೈಡರ್​ಗೆ ಬೈಕ್​ ಡಿಕ್ಕಿಯಾಗಿ ಯೂಟ್ಯೂಬರ್​ ದುರಂತ ಸಾವಿಗೀಡಾಗಿರುವ ಘಟನೆ ಯುಮುನಾ ಎಕ್ಸ್​ಪ್ರೆಸ್​ವೇನಲ್ಲಿ ನಡೆದಿದೆ. ಮೃತ ಯೂಟ್ಯೂಬರ್​ನನ್ನು ಅಗಸ್ತ್ಯ ಚೌಹಾಣ್​ (22) ಎಂದು ಗುರುತಿಸಲಾಗಿದೆ.

ಈತ ಉತ್ತರಾಖಂಡದ ಡೆಹ್ರಾಡೂನ್​ನ ಕನ್ನಾಟ್ ಪ್ಲೇಸ್ ನಿವಾಸಿ. ಬೈಕ್​ ರೈಡರ್​ ಹಾಗೂ ಯೂಟ್ಯೂಬರ್​​ ಆಗಿದ್ದ. ಈತ ವೃತ್ತಿಪರ ಬೈಕರ್​ ಆಗಿದ್ದ. ಆದರೆ, ದುರಾದೃಷ್ಟವಶಾತ್​ ಅದೇ ಬೈಕ್​ನಿಂದ ಇಂದು ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ.

Also Read  ಆಹಾರ ಸೇವಿಸಿ 40 ಮಂದಿ ಅಸ್ವಸ್ಥ...!     

error: Content is protected !!
Scroll to Top