ಚುನಾವಣಾ ನೀತಿಸಂಹಿತೆ ಉಲ್ಲಂಘನೆ ➤ನಟಿ ಉಮಾಶ್ರೀ ವಿರುದ್ಧ FIR ದಾಖಲು..!ಫ್‌

(ನ್ಯೂಸ್ ಕಡಬ)Newskadaba.com ರಾಯಚೂರು,ಮೇ.04 ಏಪ್ರಿಲ್‌ 28ರಂದು ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಉಮಾಶ್ರೀ ಅವರು ತಮ್ಮ ಭಾಷಣದಲ್ಲಿ ಬಳಸಿದ್ದ ಪದಗಳಿಗೆ ಸಂಬಂಧಿಸಿ ಅವರ ವಿರುದ್ಧ ಚುನಾವಣಾ ವಿಚಕ್ಷಣಾ ತಂಡದ ಸಿಬ್ಬಂದಿ ನೀಡಿದ ದೂರು ಆಧರಿಸಿ ಮಸ್ಕಿ ಠಾಣೆ ಪೊಲೀಸರು ಬುಧವಾರ ಎಫ್‌ಐಆರ್‌ ದಾಖಲಿಸಿದ್ದಾರೆ.’ಬಿಜೆಪಿ ನಾಯಕರು ವಿಷಜಂತುಗಳು ಮತ್ತು ಕೋಮುವಾದ ಸೃಷ್ಟಿಸಿ ಬೆಂಕಿ ಹಚ್ಚುವವರು’ ಎಂದು ಉಮಾಶ್ರೀ ಮಾತನಾಡಿದ್ದರು.

‘ಇಂಥ ಭಾಷಣದಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡು, ಸಾರ್ವಜನಿಕ ಜೀವನದಲ್ಲಿ ನೆಮ್ಮದಿ ಹಾಳಾಗುವ ಸಾಧ್ಯತೆ ಇರುತ್ತದೆ. ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

Also Read  ಸ್ಕೂಲ್ ಬಸ್ ಹಾಗೂ ಕಾರಿನ ನಡುವೆ ಢಿಕ್ಕಿ ➤ ಪ್ರಯಾಣಿಕರು ಪಾರು..!

 

 

error: Content is protected !!
Scroll to Top