ಪ್ರೀತಂ ಗೌಡ ಎಷ್ಟೇ ಹಣ ಖರ್ಚು ಮಾಡಿದರೂ ಆತನ ಸೋಲನ್ನು ನಾನು ಕಣ್ಣಿನಿಂದ ನೋಡಬೇಕು…! ➤ಎಚ್.ಡಿ. ದೇವೇಗೌಡ

(ನ್ಯೂಸ್ ಕಡಬ)Newskadaba.com ಹಾಸನ,ಮೇ.05 ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು 5 ದಿನ ಬಾಕಿಯಿದೆ. ಅಧಿಕಾರದ ಗದ್ದುಗೆಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಹಾಸನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಿಡಿಕಾರಿದರು, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಎಷ್ಟೇ ಹಣ ಖರ್ಚು ಮಾಡಿದರೂ ಆತನ ಸೋಲನ್ನು ನಾನು ಕಣ್ಣಿನಿಂದ ನೋಡಬೇಕು. ಅಭಿವೃದ್ಧಿಗೆ ಮಾರಕವಾಗಿರುವವರು ಈ ಚುನಾವಣೆಯಲ್ಲಿ ಅಂತ್ಯವಾಗಬೇಕು ಎಂದು.

ನಗರದ 80 ಫಿಟ್ ರಸ್ತೆ ಮಧ್ಯೆ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಳೆದ ಬಾರಿ ನೀವು ಬಿಜೆಪಿಗೆ ಬೆಂಬಲ ನೀಡಿದಿರಿ. ನಿಮ್ಮಲ್ಲಿ ವಿನಂತಿ ಮಾಡುತ್ತೇವೆ. ಮತ್ತೆ ಅದೇ ತಪ್ಪು ಮಾಡಬೇಡಿ. ಸ್ವರೂಪ್ ಬಳಿ ದುಡ್ಡಿದಿಯೋ ಇಲ್ಲವೋ ಗೊತ್ತಿಲ್ಲ. ನಮಗೆ ಒಂದು ಜವಾಬ್ದಾರಿ ಇದೆ. ಹಾಸನ ಕ್ಷೇತ್ರಕ್ಕೆ ಒಬ್ಬ ನಾಯಕ ಬೇಕು ಅದು ಸ್ವರೂಪ್ ಆಗಬೇಕು. ಯಾವ ವ್ಯಕ್ತಿ ನನ್ನ ಜಿಲ್ಲೆಯ ಪ್ರಗತಿಗೆ ಮಾರಕವಾದವರ ಬಗ್ಗೆ ನಿಮಗೆ ಎಚ್ಚರವಿರಲಿ ಎಂದರು.

Also Read  ಮಹಾರಾಷ್ಟದಿಂದ ಕಡಬಕ್ಕೆ ಬಂದ ಯುವಕ ➤ ಸರ್ಕಾರಿ ಶಾಲೆಯಲ್ಲಿ ಕ್ವಾರೈಂಟೈನ್

 

error: Content is protected !!
Scroll to Top