ಇಂದು ಮರ್ಧಾಳ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಗರ್ಭಗುಡಿಯ ಶಂಕುಸ್ಥಾಪನೆ ಮತ್ತು ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com ಕಡಬ, ಮೇ.05. ಕರಾಸುರ ಪ್ರತಿಷ್ಠಾಪಿತ ಋಷಿ ಮುನಿ ಪೂಜಿತ ಸರ್ವಾ ಇಷ್ಟಾರ್ಥದಾಯಕ ಪ್ರಾಚೀನ ಇತಿಹಾಸದ ಪುರಾತನ ಪ್ರಸಿದ್ಧ ಶಿಲಾಶಾಸನ ಹೊಂದಿರುವ ಮರ್ಧಾಳ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಭವ್ಯ ಮತ್ತು ನೂತನ ಗರ್ಭಗುಡಿ ನಿರ್ಮಾಣದ ಶಂಕುಸ್ಥಾಪನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವು ಮೇ.05 ಶುಕ್ರವಾರದಂದು ನಡೆಯಲಿದೆ.

ಬೆಳಿಗ್ಗೆ ಗಂಟೆ 09.15ರ ಮಿಥುನ ಲಗ್ನದ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಶಂಕುಸ್ಥಾಪನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.

Also Read  ವಿದ್ಯಾರ್ಥಿನಿಯ ಆನ್‌ಲೈನ್ ಶಿಕ್ಷಣಕ್ಕೆ ಲ್ಯಾಪ್‌ಟಾಪ್ ನೀಡಿದ ಇನ್‌ಫೋಸಿಸ್

error: Content is protected !!
Scroll to Top