ಪಂಜಾಬ್‌ ಮುಖ್ಯಮಂತ್ರಿ ಬಿಯಾಂತ್‌ ಹಂತಕನಿಗೆ ಗಲ್ಲು ಶಿಕ್ಷೆ ಖಾಯಂ..!

(ನ್ಯೂಸ್ ಕಡಬ)Newskadaba.com ಹೊಸದಿಲ್ಲಿ,ಮೇ.04 ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದ ಬಿಯಾಂತ್‌ ಸಿಂಗ್‌ ಅವರನ್ನು 1995ರಲ್ಲಿ ಹತ್ಯೆ ಮಾಡಿದ ಆರೋಪಿ ಬಲ್ವಂತ್‌ ಸಿಂಗ್‌ ರಜೋವನಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆ ರದ್ದು ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.ಈ ಬಗ್ಗೆ ಸೂಕ್ತ ಪ್ರಾಧಿಕಾರವೇ ನಿರ್ಣಯ ಕೈಗೊಳ್ಳಲಿದೆ ಎಂದು ನ್ಯಾ| ಬಿ.ಆರ್‌.ಗವಾಯಿ, ನ್ಯಾ| ವಿಕ್ರಂನಾಥ್‌ ಮತ್ತು ನ್ಯಾ| ಸಂಜಯ ಕರೋಲ್‌ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ.

ಇಪ್ಪತ್ತಾರು ವರ್ಷಗಳಿಂದ ಜೈಲಲ್ಲಿ ಇರುವ ರಜೋವ, ತನಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ ಮಾಡಬೇಕು ಎಂದು ಅರಿಕೆ ಮಾಡಿದ್ದ. ನ್ಯಾಯಪೀಠ ಸೂಕ್ತ ಪ್ರಾಧಿಕಾರಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಆತ ನೇರವಾಗಿ ರಾಷ್ಟ್ರಪತಿಗಳಿಗೇ ಮನವಿ ಮಾಡಿಕೊಳ್ಳಬೇಕಾಗಿದೆ.

Also Read  ಅಡಿಕೆ ಬೆಳೆಗಾರರ ಹಿತರಕ್ಷಣೆ ಮಾಡುವಲ್ಲಿ ಕ್ಯಾಂಪ್ಕೊ ಯಶಸ್ವಿ ➤ ಸತೀಶ್ಚಂದ್ರ

 

error: Content is protected !!
Scroll to Top