ಸರ್ವೆ: ಯುವಕ ಮಂಡಲದಿಂದ ಯೋಗಾಸನ ಮಾಹಿತಿ

(ನ್ಯೂಸ್ ಕಡಬ) newskadaba.com ಸವಣೂರು, ಜೂ.19. ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ ,ನೆಹರು ಯುವ ಕೇಂದ್ರ ಮಂಗಳೂರು, ಹಾಗೂ ಸರ್ವೆ ಷಣ್ಮುಖ ಯುವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ಸರ್ವೆ ಎಸ್.ಜಿ.ಎಂ.ಪ್ರೌಢಶಾಲೆಯಲ್ಲಿ ಯೋಗಾಸನ ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮದ ಉದ್ಘಾಟಿಸಿದ ಎಸ್.ಜಿ.ಎಂ. ಪ್ರೌಢಶಾಲಾ ಮುಖ್ಯಗುರು ಶ್ರೀನಿವಾಸ್ ಹೆಚ್.ಬಿ, ಯೋಗದ ಅನಿವಾರ್ಯತೆ ಮತ್ತು ಸಂಘಟನೆಯ ಮಹತ್ವದ ಕುರಿತು ಮಾತನಾಡಿ ಷಣ್ಮುಖ ಯುವಕ ಮಂಡಲದ ಕೆಲಸ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಪನ್ಮೂಲ ವ್ಯಕ್ತಿ ಜಯಂತ್ ವೈ ಮಾತನಾಡಿ, ಪತಂಜಲಿ ಮಹರ್ಷಿಗಳಿಂದ ಪರಿಚಯಿಸಲ್ಪಟ್ಟ ಯೋಗವನ್ನು ಎಲ್ಲರೂ ದಿನಚರಿಯಲ್ಲಿ ಅಳವಡಿಸಿಕೊಂಡು ಆರೋಗ್ಯದ ಕುರಿತು ಗಮನಹರಿಸಬೇಕೆಂದು ಹೇಳಿದರು.ನಂತರ ವಿವಿಧ ಯೋಗಾಸನಗಳನ್ನು ಶಿಬಿರಾರ್ಥಿಗಳಿಗೆ ಮಾಡಿಸಿದರು. ಅಧ್ಯಕ್ಷತೆ ವಹಿಸಿದ್ದ ಸರ್ವೆ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಎಸ್.ಡಿ, ಮಾತನಾಡಿ, ಯೋಗವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಭಾರತಕ್ಕಿದೆ. ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನಾಚರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆ ಎಂದರು. ಯುವಕ ಮಂಡಲದ ಗೌರವ ಸಲಹೆಗಾರ ಎಸ್.ಡಿ. ಶಶಿಧರ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸರ್ವೆ ಗೌರಿ ಯುವತಿ ಮಂಡಲದ ಪದಾಧಿಕಾರಿಗಳು, ತಾಲೂಕು ಯುವಜನ ಒಕ್ಕೂಟದ ಕಾರ್ಯದರ್ಶಿ ಸುಬ್ರಹ್ಮಣ್ಯ ಕರುಂಬಾರು, ಷಣ್ಮುಖ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ತಿತರಿದ್ದರು. ಕಾರ್ಯಕ್ರಮ ಸಂಯೋಜಕ ಕಿಶೋರ್ ಎಸ್.ಡಿ ಸ್ವಾಗತಿಸಿ, ಯುವಕ ಮಂಡಲದ ಕಾರ್ಯದರ್ಶಿ ತಿಲಕ್ ರಾಜ್ ಕರುಂಬಾರು ವಂದಿಸಿದರು, ಉಪನ್ಯಾಸಕ ಡಾ.ಪ್ರವೀಣ್ ಎಸ್.ಡಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top