ಭಾರತ ಮೂಲದ ಅಜಯ್ ಬಂಗಾ ಅವರಿಗೆ ವಿಶ್ವ ಬ್ಯಾಂಕ್ ಅಧ್ಯಕ್ಷ ಪಟ್ಟ

ನ್ಯೂಸ್ ಕಡಬ) newskadaba.com.ವಾಷಿಂಗ್ಟನ್ ,ಮೇ 04.  ಭಾರತ ಮೂಲದ ಅಮೆರಿಕನ್​​ ಉದ್ಯಮಿ ಅಜಯ್​ ಬಂಗಾ ವಿಶ್ವ ಬ್ಯಾಂಕ್​ನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿದ್ದರು.  ಭಾರತೀಯ ಮೂಲದ ಅಮೆರಿಕ ನಿವಾಸಿ​ ಅಜಯ್​ ಬಂಗಾ ವಿಶ್ವ ಬ್ಯಾಂಕ್​ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜೂನ್​ 2 ರಿಂದ ಮುಂದಿನ 5 ವರ್ಷಗಳವರೆಗೆ ಅಧ್ಯಕ್ಷರಾಗಿ ಇರಲಿದ್ದಾರೆ. ಬಂಗಾ ಅವರು ವಿಶ್ವಬ್ಯಾಂಕ್‌ನ 14ನೇ ಅಧ್ಯಕ್ಷರಾಗಲಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನಾಮನಿರ್ದೇಶನಗೊಂಡ ಡೇವಿಡ್ ಮಾಲ್ಪಾಸ್ ಅವರಿಂದ ಬಂಗಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

error: Content is protected !!

Join the Group

Join WhatsApp Group