ಜಮ್ಮು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ➤ ಆಫೀಸರ್ ಸೇರಿ ಮೂವರು ಗಂಭೀರ!

(ನ್ಯೂಸ್ ಕಡಬ) newskadaba.com. ನವದೆಹಲಿ, ಮೇ 04. ಜಮ್ಮು ಮತ್ತು ಕಾಶ್ಮೀರದ ಕಿಶ್​ತ್ವಾರ್ ಜಿಲ್ಲೆಯ ಮರ್ವಾಹ್ ತೆಹಸಿಲ್‌ನ ಮಚ್ನಾ ಗ್ರಾಮದ ಬಳಿ ಸೇನಾ ಕಾಪ್ಟರ್ ಎಎಲ್​ಎಚ್​ ಧ್ರುವ​ ಪತನಗೊಂಡ ಪರಿಣಾಮ ಕಾಪ್ಟರ್​ನಲ್ಲಿ ಕಮಾಂಡಿಂಗ್ ಆಫೀಸರ್ ​ಸೇರಿ ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಇಂದು ಬೆಳಗ್ಗೆ ಕಾಪ್ಟರ್​ ಮರ್ವಾ ಕಡೆಗೆ ತೆರಳುತ್ತಿದ್ದಾಗ ಇಂದು ಬೆಳಗ್ಗೆ 9.40 ಕ್ಕೆ ಪತನಗೊಂಡಿದೆ. ಸೇನೆಯ ಸುಧಾರಿತ ಲಘು ಹೆಲಿಕಾಪ್ಟರ್ ಇದಾಗಿದ್ದು, ಪತನಕ್ಕೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

error: Content is protected !!

Join the Group

Join WhatsApp Group