ಸೀಟ್​ ಬೆಲ್ಟ್ ಧರಿಸಿದ ಕಾರಣಕ್ಕೆ ಬೈಕ್​ ಸವಾರನಿಗೆ ದಂಡ..!  ➤ನಗೆಪಾಟಲಿಗೀಡಾದ ಸಂಚಾರಿ ಪೊಲೀಸರು

(ನ್ಯೂಸ್ ಕಡಬ)Newskadaba.com ಬಿಹಾರ,ಮೇ.04 ಪ್ರತಿಯೊಂದು ರಾಜ್ಯದಲ್ಲೂ ಸಂಚಾರ ನಿಯಮವನ್ನು ಪಾಲಿಸದೇ ಇದ್ದರೆ ಫೈನ್​ ಕಟ್ಟಲೇಬೇಕು. ಸೀಟ್​ ಬೆಲ್ಟ್ ಧರಿಸಿಲ್ಲ ಅನ್ನೋಕಾರಣಕ್ಕೆ ಬೈಕ್​ ಸವಾರರೊಬ್ಬರಿಗೆ ಸಂಚಾರಿ ಪೊಲೀಸರು ದಂಡ ಪಾವತಿಸಲು ನೋಟೀಸ್​ ನೀಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಸಮತಿಪುರದ ಕೃಷ್ಣಕುಮಾರ್ ಎಂಬುವವರಿಗೆ ಪೊಲೀಸರು ದಂಡದ ನೋಟೀಸ್ ಕಳುಹಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. 2020ರಲ್ಲಿ ನಿಯಮ ಉಲ್ಲಂಘನೆ ಮಾಡಿರುವುದಾಗಿ ನೋಟೀಸ್​​ನಲ್ಲಿ ಉಲ್ಲೇಖವಾಗಿದೆ. ನಿಯಮ ಉಲ್ಲಂಘಿಸಿದ್ದಕ್ಕೆ ಸ್ಕೂಟರ್ ಸವಾರ ಕೃಷ್ಣಕುಮಾರ್ ಅವರಿಗೆ 1000 ರೂ. ದಂಡ ಪಾವತಿಸುವಂತೆ ನೋಟೀಸ್​ನಲ್ಲಿ ತಿಳಿಸಿಲಾಗಿದೆ.ಆದರೆ ಈ ಘಟನೆಯಲ್ಲಿ ಪೊಲೀಸರು ಬೈಕ್​ ಸವಾರನಿಗೆ ಸೀಟು ಬೆಲ್ಟ್​ ಹಾಕಲಿಲ್ಲ ಎಂದು ದಂಡದ ನೋಟೀಸ್​ ನೀಡಿ ನಗೆಪಾಟಲಿಗೀಡಾಗಿದ್ದಾರೆ.

Also Read  ?? ಉಪ್ಪಳ: ಯುವಕನ ಮೇಲೆ ತಂಡದಿಂದ ಮಾರಣಾಂತಿಕ ಹಲ್ಲೆ

 

error: Content is protected !!
Scroll to Top