ಮಂಗಳೂರು : ಕ್ರೆಡಿಟ್ ಕಾರ್ಡ್ ಮರುನೋಂದಣಿ ನೆಪದಲ್ಲಿ 1.37 ಲಕ್ಷ.ರೂ ವಂಚನೆ

(ನ್ಯೂಸ್ ಕಡಬ) newskadaba.com. ಮಂಗಳೂರು, ಮೇ 04. ಕ್ರೆಡಿಟ್ ಕಾರ್ಡ್ ಮರುನೋಂದಣಿ ನೆಪದಲ್ಲಿ ಲಿಂಕ್ ಕಳುಹಿಸಿ ವ್ಯಕ್ತಿಯೋರ್ವರಿಗೆ 1.37 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ದೂರುದಾರರ ಇಮೇಲ್ ಐಡಿಗೆ ಮೇ 1ರಂದು lyall-nalda@xtra.co.nz ಇ-ಮೇಲ್ ಐಡಿಯಿಂದ Netflix Order Failed-action needed ಎಂಬ ಸಂದೇಶ ಬಂದಿತ್ತು. ಅದನ್ನು ತೆರೆದಾಗ ಅದರಲ್ಲಿ ‘ನಿಮ್ಮ ಕ್ರೆಡಿಟ್ ಕಾರ್ಡ್ ವಿಫಲವಾಗಿದೆ. ಅದನ್ನು ರಿ ರಿಜಿಸ್ಟರ್ ಮಾಡಬೇಕು’ಎಂದು ಬರೆಯಲಾಗಿತ್ತು.

ಅದರ ಜತೆಗೆ ಲಿಂಕ್ ಕಳುಹಿಸಲಾಗಿತ್ತು. ದೂರುದಾರ ಆ ಲಿಂಕ್ ತೆರೆದು ನೋಡಿದಾಗ ಅದರಲ್ಲಿ ಕ್ರೆಡಿಟ್ ಕಾರ್ಡ್ ವಿವರಗಳನ್ನು ಹಾಕುವಂತೆ ತಿಳಿಸಲಾಗಿತ್ತು. ಅದನ್ನು ನಂಬಿದ ದೂರುದಾರರು ತಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಅದರಲ್ಲಿ ನಮೂದಿಸಿದ್ದರು. ಅನಂತರ ಅದನ್ನು ವೆರಿಫಿಕೇಶನ್ ಮಾಡಲು ಒಟಿಪಿ ಬಂದಿದ್ದು ಆ ಒಟಿಪಿಯನ್ನು ಹಾಕಿದ್ದರು. ಆ ಕೂಡಲೆ ಅವರ ಕ್ರೆಡಿಟ್ ಕಾರ್ಡ್‌ನಿಂದ 1,37,432 ರೂ. ವರ್ಗಾವಣೆಯಾದ ಬಗ್ಗೆ ಮೆಸೇಜ್ ಬಂದಿದೆ. ಈ ಬಗ್ಗೆ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!
Scroll to Top