ಪೊಲೀಸ್ ಕಾನ್ ಸ್ಟೆಬಲ್ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ..!

(ನ್ಯೂಸ್ ಕಡಬ)Newskadaba.com ಕಲಬುರಗಿ,ಮೇ.04 ಚಿತ್ತಾಪುರ ಪಟ್ಟಣದ ತಹಶೀಲ್ದಾರ್ ಕಚೇರಿಯ ಕಟ್ಟಡದ ಮೇಲೆ ಪೊಲೀಸ್ ಕಾನ್ ಸ್ಟೆಬಲ್ ಒಬ್ಬರು 303 ರೈಫಲ್ ನಿಂದ ಗುಂಡು ಹಾರಿಸಿಕೊಂಡು ಗುರುವಾರ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸ್ ಕಾನ್ ಸ್ಟೆಬಲ್ ಮಲ್ಲಿಕಾರ್ಜುನ ಮೃತಪಟ್ಟವರು.

ತಹಶೀಲ್ದಾರ್ ಕಚೇರಿಯಲ್ಲಿ ಕಸಗುಡಿಸುವವರು ಕಟ್ಟಡದ ಮೇಲೆ ಬಂದಾಗ ಈ ದುರ್ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.ಗಂಟಲಿನ ಮೂಲಕ ನುಗ್ಗಿದ ಗುಂಡು ನೆತ್ತಿಯ ಮೂಲಕ ಹೊರಗೆ ಬಂದಿದೆ. ಕೈಯಲ್ಲಿ ಬಂದೂಕು ಹಿಡಿದುಕೊಂಡಿರುವ ಸ್ಥಿತಿಯಲ್ಲಿ ಮೃತದೇಹದ ಕಂಡುಬಂದಿದೆ.

Also Read  ಜನವರಿ 16 ರಿಂದ ಬೆಂಗಳೂರು- ಮೈಸೂರು ನಡುವೆ ಎಲೆಕ್ಟ್ರಿಕ್ ಬಸ್‌ ಸೇವೆ ಆರಂಭ  

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸ್ ಠಾಣೆಯ ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್‌ಐ ನಂದಕುಮಾರ, ತಹಶೀಲ್ದಾರ್ ಷಾಷಾವಲಿ ಅವರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ.

 

 

 

error: Content is protected !!
Scroll to Top